ಉಡುಪಿ ನ್ಯೂಸ್ ಪ್ಲಸ್

ಕಾಪು ಬೀಚ್ ನ ನೂತನ ಸಿಬ್ಬಂದಿ ಕಚೇರಿ ಉದ್ಘಾಟಿಸಿದ ಶಾಸಕ ಲಾಲಾಜಿ ಮೆಂಡನ್

ಕಾಪು ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಕಾಪು ಬೀಚ್ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ. ” ಬೀಚ್ ಸಿಬ್ಬಂದಿ ಕಚೇರಿ”ಯನ್ನು ಕಾಪು ಕ್ಷೇತ್ರದ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಿತಿನ್ ಕುಮಾರ್, ಅನಿಲ್ ಕುಮಾರ್, ನವೀನ್ ಅಮೀನ್, ಲಾಲ್ ಬಹಾದ್ದೂರ್ ಶಾಸ್ತ್ರೀ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಅಧ್ಯಕ್ಷರು ಶೀಲಾರಾಜ್ ಪುತ್ರನ್, ಕಾಪು ಮೊಗವೀರ ಮಹಾಸಭಾ ಮಾಜಿ ಅಧ್ಯಕ್ಷರು ಮೋಹನ್ ಬಂಗೇರ ಸ್ಥಳೀಯ ಮುಖಂಡರಾದ ಪ್ರವೀಣ್ ಪೂಜಾರಿ, ಆನಂದ್ ಶ್ರೀಯಾನ್, ಸಂತೋಷ್ ಶ್ರೀಯಾನ್, ಉದ್ಯಮಿ ಮಹಮ್ಮದ್ ಆಲಿ ಹಾಗೂ ಬೀಚ್ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು

Exit mobile version