ಕಟಪಾಡಿ ಮಟ್ಟು ಬೀಚ್ ನಲ್ಲಿ ಭೂತಾಯಿ ಮೀನಿನ ಸುಗ್ಗಿ ಕಂಡು ಬಂದಿದೆ.ಹನುಮ ದೀಕ್ಷಾ ಕೈರಂಪಣಿಯ ಮೀನುಗಾರಿಕೆ ಸಂದರ್ಭದಲ್ಲಿ ದೊಡ್ಡ ಗಾತ್ರದ ಭೂತಾಯಿ ಮೀನು ಬಲೆಯಲ್ಲಿ ಹಿಡಿಯಲಾಗಿದ್ದು, ಸುಮಾರು ನಾಲ್ಕು ಟನ್‌ನಷ್ಟು ಮೀನು ಲಭಿಸುವ ಮೂಲಕ ಮೀನಿನ ಸುಗ್ಗಿಯೇ ಕಂಡು ಬಂದಿತ್ತು. ಬೂತಾಯಿ,ಬಂಗುಡೆ, ಕಲ್ಲೂರು ಸೇರಿದಂತೆ ವಿವಿಧ ಬಗೆಯ ಮೀನುಗಳು ಹೇರಳವಾಗಿ ಬಿದ್ದಿದ್ದು, ಇಂದು ಅಧಿಕ ಮೀನುಗಳ ಸಂಗ್ರಹವಾಗಿದೆ. ಸುದ್ದಿ ತಿಳಿದು ಸ್ಥಳಿಯರು ಕೂಡ ಸ್ಥಳಕ್ಕೆ ಧಾವಿಸಿ ಮೀನು ಹೆಕ್ಕುವುದರಲ್ಲೇ ಬಿಜಿಯಾಗಿದ್ದರು.


