ಉಡುಪಿ ನ್ಯೂಸ್ ಪ್ಲಸ್

ಹಿಜಾಬ್ ತೀರ್ಪು ದ್ವಿಸದಸ್ಯ ಪೀಠಕ್ಕೆ ಗೌರವ ಸಲ್ಲಿಸುತ್ತೇವೆ. ಹುಸೇನ್ ಕೋಡಿಬೆಂಗ್ರೆ

ಹಿಜಾಬ್ ಕುರಿತಾಗಿ ದ್ವಿಸದಸ್ಯ ಪೀಠದಿಂದ ವಿಭಿನ್ನ ಅಭಿಪ್ರಾಯಗಳು ಬಂದಿವೆ. ಫಿಫ್ಟಿ ಫಿಫ್ಟಿ ತೀರ್ಪು ಬರಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು.ನ್ಯಾಯ ವ್ಯವಸ್ಥೆಗೆ ನಾವು ಸಲಾಂ ಕೊಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಅರ್ಜಿದಾರ, ಎಪಿಸಿಆರ್ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಹೇಳಿದ್ದಾರೆ.ಹಿಜಾಬ್ ಕುರಿತ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ ವಿಭಿನ್ನ ತೀರ್ಪು ಪ್ರಕಟಿಸಿರುವ ಕಾರಣ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಯಥಾಸ್ಥಿತಿಯಲ್ಲಿಟ್ಟಿರುವ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ವರ್ಗಾಯಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಯುತ ಮತ್ತು ಮೂಲಭೂತ ಹಕ್ಕಿಗೆ ನಮ್ಮಭಾರತದಲ್ಲಿ ಅವಕಾಶವಿದೆ ಎಂದು ಇವತ್ತು ಸಾಬೀತಾಗಿದೆ.ಹೆಣ್ಣು ಮಕ್ಕಳಿಗೆ ಹೆಚ್ಚು ಶೈಕ್ಷಣಿಕವಾಗಿ ಸಹಾಯ ಮಾಡಬೇಕು, ತುಳಿಯಬಾರದು. ಮೂಲಭೂತ ಹಕ್ಕಿಗೆ ಮಾನ್ಯತೆ ಕೊಡಬೇಕು ಎಂದು ಕೋರ್ಟ್‌ನಲ್ಲಿ ಚರ್ಚೆಯಾಗಿದೆ. ಸಂತ್ರಸ್ತರ ಪರವಾಗಿ ಹಲವಾರು ಅಂಶಗಳು ನೀಡುತ್ತದೆ ಎಂಬ ನಂಬಿಕೆ ಇದೆ ಎಂದರು.ದಿ ಸದಸ್ಯಪೀಠಕ್ಕೆ ನಾವು ಗೌರವ ಸಲ್ಲಿಸುತ್ತೇವೆ. . ದೇಶದ ಸಾವಿರಾರು ವಿದ್ಯಾರ್ಥಿನಿಯರ ಶಿಕ್ಷಣದ ವಿಚಾರ ಇದು.ಸಂವಿಧಾನದಲ್ಲಿ ಶಿಕ್ಷಣಕ್ಕೆ ಅವಕಾಶ ಇದೆ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು

Exit mobile version