Site icon ಉಡುಪಿ ನ್ಯೂಸ್ ಪ್ಲಸ್

ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಬಾಲ ನಟ ರಾಹುಲ್ ಕೋಳಿ ಇನ್ನಿಲ್ಲ

ನವದೆಹಲಿ: ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದ್ದ ಚೆಲ್ಲೋ ಶೋ ಸಿನಿಮಾ ಚಿತ್ರದ ಬಾಲನಟ ರಾಹುಲ್ ಕೋಲಿ (10) ಕೊನೆಯುಸಿರೆಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಾಹುಲ್ ಇಂದು (ಅಕ್ಟೋಬರ್ 11) ಅಹಮದಾಬಾದ್‌ನಲ್ಲಿ ಇಹಲೋಕ ತ್ಯಜಿಸಿದ. ಈ ನೋವಿನ ಸುದ್ದಿ ತಿಳಿದು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಮೂಲಗಳ ಪ್ರಕಾರ ರಾಹುಲ್ ರಕ್ತ ವಾಂತಿ ಮಾಡಿಕೊಂಡಿದ್ದ. ನಂತರ ಜ್ವರ ಕೂಡ ಬಂದಿತ್ತು. ಬಳಿಕ ಆತ ಕೊನೆಯುಸಿರಳದ ಚಲೋ ಶೋ ಸಿನಿಮಾದಲ್ಲಿ 10 ವರ್ಷದ ರಾಹುಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾಗುವ ಮೊದಲೇ ಬಾರದ ಲೋಕಕ್ಕೆ ತೆರಳಿದ್ದಾನೆ. ಆತನ ನಿಧನದಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳಯುವಂತಾಗಿದೆ.

Exit mobile version