ಉಡುಪಿ ಜಿಲ್ಲಾ ಕಾಂಗ್ರೆಸ್ ಸೇವಾದಳ ವತಿಯಿಂದ ಶ್ರೀ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಂಭಾಗದಲ್ಲಿ ಸಾಗುತ್ತಿರುವ ರಾಷ್ಟ್ರಧ್ವಜವನ್ನು ಹಿಡಿಯುವ ಮೂಲಕ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. 9 ನೇ ದಿನದ ಪಾದಯಾತ್ರೆ ಬೆಳಿಗ್ಗೆ ತುಮಕೂರಿನ ತುರುವೇಕೆರೆ ಮಾಯಸಂದ್ರ ಪೊಲೀಸ್ ಸ್ಟೇಷನ್ ನಿಂದ ಸಂಜೆ ಗಂಟೆ 7 ರ ವರೆಗೆ ತುರುವೇಕೆರೆ ಹರಿದಾಸನಹಳ್ಳಿ ವರೆಗೆ ನಡೆಯಿತು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರ್ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಎರ್ಮಾಳ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ನಾಯ್ಕ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಶ್ರೀ ಅಬ್ದುಲ್ಲ ಶೇಕ್ ಆದಂ ಸಾಹೇಬ್ ರೊಂದಿಗೆ 30ಕ್ಕೂ ಹೆಚ್ಚು ಸೇವಾದಳ ಸದಸ್ಯರು ಸಮವಸ್ತ್ರ ದೊಂದಿಗೆ ಭಾಗವಹಿಸಿದರು.


