
ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಶ್ರೀ ದೇವಸ್ಥಾನದ ಸಹಯೋಗದೊಂದಿಗೆ ಉಚ್ಚಿಲ ದಸರಾ ಮಹೋತ್ಸವದ ಅಂಗವ ಮೊಗವೀರ ಭವನ ಉಚ್ಚಿಲದಲ್ಲಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮ ಚಿತ್ರ ಬಿಡಿಸುವ ಸ್ಪರ್ಧೆಯ ಅತ್ಯುತ್ತಮ ಚಿತ್ರಗಳನ್ನು ಗುರುತಿಸಿ ತೀರ್ಪುಗಾರರಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕಲಾವಿದರಾದ ರಮೇಶ್ ಕಿದಿಯೂ, ಶೇಖರ್ ಕಲಾ ಪ್ರತಿಭಾ, ಶ್ರೀಧರ್ ತೊಟ್ಟಂ ರವರು ವಿಜೇತರನ್ನು ಆಯ್ಕೆ ಮಾಡಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ. 1ರಿಂದ 4 ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ಅನ್ವಿತ್ ಆರ್.ಶೆಟ್ಟಿಗಾರ್ (ಸೈಂಟ್ ಮೇರೀಸ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್, ಕನ್ನರ್ಪಾಡಿ.), ದ್ವಿತೀಯ ಬಹುಮಾನ ಸಿದ್ದಿಕ್ಷ (ಶಾರದಾ ವಿದ್ಯಾಲಯ ಮಂಗಳೂರು), ತೃತೀಯ ಬಹುಮಾನ ಸ್ತುತಿ ಆಚಾರ್ಯ (ಕೆ.ಪಿ.ಎಸ್. ಮುನಿಯಾಲು) ಹಾಗೂ ಸಮಾಧಾನಕರ ಬಹುಮಾನ ಪಾವನಿ ಜೆ. ರಾವ್(ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಉಡುಪಿ.), ಪುಷ್ಪ ಪೂಜಾರಿ (ಸಿಲಾಸ್ ಇಂಟರ್‌ನ್ಯಾಷನಲ್ ಉಡುಪಿ) ಮತ್ತು ಕೆ. ಪ್ರಣವ್ ಶೇಟ್(ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ) ಆಯ್ಕೆಯಾಗಿದ್ದಾರೆ. 5 ರಿಂದ 7 ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ವಿನೀಷ್ ಆಚಾರ್ಯ (ಎಸ್. ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ.), ದ್ವಿತೀಯ ಬಹುಮಾನ ಧೃತಿ ಎಸ್.(ಲಿಬ್ಲಾಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಬ್ರಹ್ಮಾವರ), ತೃತೀಯ ಬಹುಮಾನ ಅದಿತ್ (ಕೆನರಾ ಹಿರಿಯ ಪ್ರಾಥಮಿಕ ಶಾಲೆ, ಉರ್ವ) ಹಾಗೂ ಸಮಾಧಾನಕರ ಬಹುಮಾನ ಕಶ್ಚಿ ಎ. ಪಾಂಗಾಳ್ (ಹೋಲಿ ಫ್ಯಾಮಿಲಿ ಸ್ಕೂಲ್, ಸುರತ್ಕಲ್), ಕಾರ್ತಿಕ್ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ), ಅದಿತಿ (ವಾಸುದೇವ ಕೃಪಾ ವಿದ್ಯಾ ಮಂದಿರ, ಬೈಲೂರು), ಯಶ್ ಎನ್.ಸಾಲ್ಯಾನ್ (ಹೋಲಿ ಫ್ಯಾಮಿಲಿ ಸ್ಕೂಲ್, ಸುರತ್ಕಲ್) ಆಯ್ಕೆಯಾಗಿದ್ದಾರೆ. 8 ರಿಂದ 10 ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ಅಕ್ಷಜ್ (ಎನ್ ಐ ಟಿ ಕೆ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಸುರತ್ಕಲ್), ದ್ವಿತೀಯ ಬಹುಮಾನ ಕೆ.ಪ್ರತೀಕ್ಷಾ ಶೇಟ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), ತೃತೀಯ ಸ್ಪರ್ಶ ಪ್ರದೀಪ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಹಾಗೂ ಸಮಾಧಾನಕರ ಬಹುಮಾನ ದೀಪಿಕಾ ಭಟ್ (ಸೈಂಟ್ ಸಿಸಿಲೀಸ್ ಹೈಸ್ಕೂಲ್ ಉಡುಪಿ), ಎಸ್. ಪ್ರಮುಖ್ ಐತಾಳ್ (ಶಾರದಾ ವಿದ್ಯಾಲಯ ಮಂಗಳೂರು), ಸಮೀಕ್ಷಾ (ಕೆ.ಎಂ.ಇ.ಎಸ್. ಕುಕ್ಕುಂದೂರು) ಆಯ್ಕೆಯಾಗಿದ್ದಾರೆ. ಪಿಯುಸಿ ಮತ್ತು ಪದವಿ ವಿಭಾಗದಲ್ಲಿ ಪ್ರಥಮ ಬಹುಮಾನ ಅತುಲ್ (ಕೆನರಾ ಡಿಗಿ, ಕಾಲೇಜು,ಮಂಗಳೂರು), ದ್ವಿತೀಯ ಬಹುಮಾನ ಅಮಿತ್ ರಾಜ್ (ಮಾನಸ ಕಾಲೇಜು, ಮಂಗಳೂರು.), ತೃತೀಯ ಬಹುಮಾನ ಆದರ್ಶ ಭಟ್ (ಪೂರ್ಣಪ್ರಜ್ಞಾ ಕಾಲೇಜು, ಉಡುಪಿ) ಹಾಗೂ ಸಮಾಧಾನಕರ ಬಹುಮಾನ ವೈಭವ್ ವಿ. ಆಚಾರ್ಯ (ಎಸ್. ಎಮ್.ವಿ.ಐ. ಟಿ.ಎಮ್.ಬಂಟಕಲ್ಲು), ಬಿಂದು ಕೆ.(ತೃಷಾ ಕಾಲೇಜ್ ಆಫ್ ಕಾಮರ್ಸ್, ಮಂಗಳೂರು), ಪ್ರಜ್ಞಾ ಬಿ.ಶೆಟ್ಟಿಗಾರ್ ಆಯೆಯಾಗಿದ್ದಾರೆ. ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಚರಣ್ ಕುಮಾರ್, ದ್ವಿತೀಯ ಬಹುಮಾನ ಅಶ್ವತ್, ತೃತೀಯ ಬಹುಮಾನ ವಸುಧಾ ಕುಂಬ್ಳೆಕರ್ ಹಾಗೂ ಸಮಾಧಾನಕರ ಬಹುಮಾನ ಶಶಿಧರ್ ಸರ್ದಾಳುಗಳಿಗೆ ಮಾನ ನೀಡರಿಗೆ ಬಂಗೇರ, ಧನಂಜಯ ಬಿ. ಅಮೀನ್, ಖುಷಿ ಪಿ. ಕುಂದರ್ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ, ಬಹುಮಾನ ವಿಜೇತರಿಗೆ ಹಾಗೂ ತೀರ್ಪುಗಾರರಿಗೆ ಬ್ಯಾಂಕಿನ ವತಿಯಿಂದ ಅಭಿನಂದನೆ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ವಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.