Site icon ಉಡುಪಿ ನ್ಯೂಸ್ ಪ್ಲಸ್

ಪಂಚಾಯತ್ ರಾಜ್ ವ್ಯವಸ್ಥೆಗೆ ರಾಜ್ಯ ಸರಕಾರದಿಂದ ಕೊಡಲಿಯೇಟು. – ದೇವಿಪ್ರಸಾದ್ ಶೆಟ್ಟಿ

ವ್ಯವಸ್ಥಿತ ಪಿತೂರಿ ಮೂಲಕ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಗಳ ಮೂಲಕ ಆದೇಶವೊಂದನ್ನು ಎಲ್ಲಾ ಗ್ರಾಮ ಪಂಚಾಯತ್‌ಗಳಿಗೂ ಕಳುಹಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಜನಪ್ರತಿನಿಧಿಗಳ ಅಧಿಕಾರವು ಮೊಟಕುಗೊಳಿಸಿದೆ ಎಂದು ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯತ್ ರಾಜ್ ಪ್ರತಿನಿಧಿಗಳ ಒಕ್ಕೂಟದ ಉಪಾಧ್ಯಕ್ಷರಾಗಿರುವ ಬೆಳಪು ದೇವಿಪ್ರಸಾದ್ ಶೆಟ್ಟಿ ಟೀಕಿಸಿದ್ದಾರೆ. ಈ ಮೂಲಕ ಗ್ರಾಮ ಸ್ವರಾಜ್ ಕನಸಿಗೆ ಬಿಜೆಪಿ ಸರಕಾರ ಕೊಡಲಿಯೇಟು ನೀಡಿದೆ ಎಂದವರು ಆರೋಪಿಸಿದರು. ಈ ಮೂಲಕ ಅಧಿಕಾರಶಾಹಿ ವ್ಯವಸ್ಥೆಗೆ ಸರಕಾರ ಪರೋಕ್ಷವಾಗಿ ಮಣಿದಂತಾಗಿದೆ ಎಂದವರು ಆರೋಪಿಸಿದರು. ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಇದರ ವಿರುದ್ಧ. ಹೋರಾಟ ನಡೆಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

Exit mobile version