Site icon ಉಡುಪಿ ನ್ಯೂಸ್ ಪ್ಲಸ್

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಆಗುಂಬೆ ಘಾಟಿಗೆ ಪ್ರಥಮ ಆದ್ಯತೆ ನೀರ ಕೃಷ್ಣಶೆಟ್ಟಿ ಒತ್ತಾಯ

 

ಕಾರ್ಕಳ ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕ ಗೋಪಾಲ ಭಂಡಾರಿ ಮತ್ತು ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ವಿಶೇಷ ಪ್ರಯತ್ನ ನಡೆಸಿದ್ದರ ಫಲವಾಗಿ 2013ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಹೆದ್ದಾರಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಮತ್ತು ಅರಣ್ಯ ಪರಿಸರ ಸಚಿವರಾಗಿದ್ದ ಡಾ. ವೀರಪ್ಪಮೊಯಿಲಿ ಅವರು ಮಲ್ಪೆ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಮಂಜೂರಗೊಳಿಸಿದ್ದರು ಮಂಜೂ ರಾತಿ ಅದೇಶದಲ್ಲಿ 40 ಮೀಟರ್ ಅಗಲದ ರಾಷ್ಟ್ರೀಯ ಹೆದ್ದಾರಿ ಮತ್ತು ಮೊದಲು ಆಗುಂಬೆ ಘಾಟಿಯನ್ನು ನಿರ್ಮಿಸಿ ಬಳಿಕ ಹೆದ್ದಾರಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು.ಆದರೆ ನರೇಂದ್ರ ಮೋದಿ ಸರ್ಕಾರ ಈಗ ಅತೀ ಅಗತ್ಯದ ಆಗುಂಬೆ ಘಾಟಿಯ ನಿರ್ಮಾಣಕ್ಕೆ ಮನಸ್ಸು ಮಾಡುತ್ತಿಲ್ಲ. ಆಗುಂಬೆ ಘಾಟಿಯನ್ನು ಮೊದಲು ನಿರ್ಮಾಣ ಮಾಡಿ ಬಳಿಕ ಹೆದ್ದಾರಿಯ ಕಾಮಗಾರಿಯನ್ನು ಆರಂಭಿಸುವಂತೆ ಕೆಪಿಸಿಸಿ ಸದಸ್ಯ ನೀರ ಕೃಷ್ಣಶೆಟ್ಟಿ ಒತ್ತಾಯಿಸಿದ್ದಾರೆ ಪ್ರತೀ ವರ್ಷವು ಮಳೆಗಾಲದಲ್ಲಿ ಘಟಿಯು ಕುಸಿಯುತಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು ಬೃಹತ್ ಮರಗಳು ಕೂಡ ಘಾಟಿಯಲ್ಲಿ ಉರುಳಿ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು ಸಹಿತ ಮಲೆನಾಡಿನಿಂದ ಮಣಿಪಾಲ ಆಸ್ಪತ್ರೆಗೆ ಮತ್ತು ತೀರ್ಥಯಾತ್ರೆಗೆ ಸಾಕಷ್ಟು ಜನ. ಬರುತ್ತಿದ್ದು ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರಥಮ ಆದ್ಯತೆಯಲ್ಲಿ ಆಗುಂಬೆ ಘಾಟಿಯ ಕೆಲಸ ನಡೆಸಬೇಕು ಎಂದು ನೀರೆ ಕೃಷ್ಣಶೆಟ್ಟಿ ಒತ್ತಾಯಿಸಿದ್ದಾರೆ

Exit mobile version