ಉಡುಪಿ ನ್ಯೂಸ್ ಪ್ಲಸ್

*ಅಧಿಕಾರದ ವಿಕೇಂದ್ರೀಕರಣದ ಆಶಯಗಳನ್ನು ಹೊತ್ತು ಅನುಷ್ಟಾನಿಸಲ್ಪಟ್ಟ ಪಂಚಾಯತ್ ರಾಜ್ ವ್ಯವಸ್ಥೆಗೆ ರಾಜ್ಯ ಸರಕಾರದಿಂದ ಕೊಡಲಿಯೇಟು.

ರಾಜ್ಯ ಸರಕಾರವು ಮುಖ್ಯ ಕಾರ್ಯದರ್ಶಿಗಳ ಮೂಲಕ ಆದೇಶವೊಂದನ್ನು ಪಂಚಾಯತ್ ಗಳಿಗೆ ರವಾನಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧ್ಯಕ್ಷರ ಹಾಗೂ ಪಂಚಾಯತ್ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿ ಗ್ರಾಮ ಸ್ವರಾಜ್ಯದ ಆಶಯಗಳಿಗೆ ಕೊಡಲಿಯೇಟು* ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹ ಸಂಚಾಲಕಿ ಹಾಗೂ ಮೈಸೂರು ವಿಭಾಗದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಸ್ತುವಾರಿ ಆಗಿರುವ ರೋಶನಿ ಒಲಿವರ್ ವರು ಆರೋಪಿಸಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇನ್ನು ಮುಂದಕ್ಕೆ ಬಿಲ್ ಪಾಸ್ ಮಾಡುವ ಅಥವಾ ಚೆಕ್ ಮೂಲಕ ಪಾವತಿಗೈಯುವ ವ್ಯವಸ್ಥೆಗೆ ಅಧ್ಯಕ್ಷರು ಸಹಿ ಮಾಡುವಂತಿಲ್ಲ ಈ ಅಧಿಕಾರವನ್ನು ಪಿ ಡಿ ಓ ಮತ್ತು ಲೆಕ್ಕ ಸಹಾಯಕರಿಗೆ ಜಂಟಿಯಾಗಿ ನೀಡಲಾಗಿದೆ. ನಿರಾಕ್ಷೇಪಣಾ ಪತ್ರ ಮುಂತಾದ ಆದೇಶಗಳನ್ನು ಪಂಚಾಯತ್ ಸಭೆಗಳಲ್ಲಿ ಮಂಡಿಸಿ ಯಾವುದೇ ಆಕ್ಷೇಪಣೆಗಳಿಲ್ಲದಿದ್ದಲ್ಲಿ ಮುಂದೆ ಆಯಾಯ ವ್ಯಕ್ತಿಗೆ ನೀಡುವ ಅಧಿಕಾರವನ್ನು ಕಳಚಿ ನೇರವಾಗಿ ಪಿ.ಡಿ.ಓ ಇವುಗಳನ್ನೆಲ್ಲಾ ನೀಡಬಹುದೆಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಲಿದೆ. ಗೌರವಾನ್ವಿತ ಪಂಚಾಯತ್ ಅಧ್ಯಕ್ಷರ ಹಾಗೂ ಪಂಚಾಯತ್ ಸದಸ್ಯರ ಅಧಿಕಾರವನ್ನು ಕಸಿದುಕೊಳ್ಳಲು ಆದೇಶ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದನ್ನು ನಾವೆಲ್ಲರೂ ತಿಳಿಯಬೇಕಾಗಿದೆ. ಆದ್ದರಿಂದ ಈ ವ್ಯವಸ್ಥೆಯನ್ನು ಕೂಡಲೇ ತಿದ್ದುಪಡಿ ಮಾಡದಿದ್ದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಸೇರಿಸಿಕೊಂಡು ಉಗ್ರವಾದ ಹೋರಾಟ ಮಾಡುವುದಾಗಿ ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version