Site icon ಉಡುಪಿ ನ್ಯೂಸ್ ಪ್ಲಸ್

ಉಚ್ಚಿಲ ದಸರಾ: ಶೋಭಾಯಾತ್ರೆಯಲ್ಲಿ ಶಾರಾದೆಗೆ ಹೆಲಿಕ್ಯಾಪ್ಟರ್‌ನ ಮೂಲಕ ಪುಷ್ಪವೃಷ್ಟಿ

ಮೊಗವೀರ ಮಹಾಜನ ಸಂಘ ಆಡಳಿತದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಚೊಚ್ಚಲ ಉಚ್ಚಿಲ ದಸರಾ ಉತ್ಸವ-2022 ಇದರ ಶೋಭಾಯಾತ್ರೆಯ ಆರಂಭದಲ್ಲಿ ಹೆಲಿಕಾಪ್ಟರ್ ಮೂಲಕ ಶ್ರೀಶಾರದಾ ಮಾತೆ ಹಾಗೂ ನವದುರ್ಗೆಯರಿಗೆ ಪುಷ್ಪವೃಷ್ಟಿ ಮಾಡಲಾಯಿತು.ರಾಷ್ಟ್ರೀಯ ಹೆದ್ದಾರಿ 66ರ ಸುಮಾರು 26 ಕಿ.ಮೀ. ದೂರ ಸಾಗಿದ ಬೃಹತ್ ಶೋಭಾಯಾತ್ರೆ ಯಲ್ಲಿ ದಶವಿಗ್ರಹಗಳನ್ನೊಳಗೊಂಡ 10 ವಿಶೇಷ ಟ್ಯಾಬ್ಲೊಗಳೊಂದಿಗೆ ವಿವಿಧ ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಹುಲಿ ವೇಷಗಳು ಸೇರಿದಂತೆ 100ಕ್ಕೂ ಅಧಿಕ ಟ್ಯಾಬ್ಲೊಗಳು ಆಕಷರ್ಣೀಯವಾಗಿದ್ದವು.ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಟ ಶೋಭಾಯಾತ್ರೆ ಎರ್ಮಾಳ್- ಪಡುಬಿದ್ರಿ -ಹೆಜಮಾಡಿ ಟೋಲ್‌ಗೇಟ್‌ವರೆಗೆ ಸಾಗಿ ಅಲ್ಲಿಂದ ಮರಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪಡುಬಿದ್ರಿ- ಎರ್ಮಾಳ್ ಉಚ್ಚಿಲ ಮೂಳೂರು- ಕೊಪ್ಪಲಂಗಡಿ ಯಿಂದ ಮಾರ್ಗವಾಗಿ ಸಾಗಿ ಕಾಪು ದೀಪಸ್ತಂಭದ ಬಳಿ ಆಗಮಿಸಿ, ತಡರಾತಿ ಸಮುದ್ರದಲ್ಲಿ ವಿಸರ್ಜನೆಗೊಳಿಸಲಾಯಿತು.  

video lnk

 

https://youtu.be/PtfBbrGLnwU

Exit mobile version