Site icon ಉಡುಪಿ ನ್ಯೂಸ್ ಪ್ಲಸ್

​ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ. ~ ಸಾಹಿತಿ ಇಂದಿರಾ ಹಾಲಂಬಿ ಮಲಬಾರ್​ ವಿಶ್ವಸಾಹಿತ್ಯ ಪುರಸ್ಕಾರ ಪ್ರದಾನ

ಉಡುಪಿ: ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಆದರೆ ಜನರು ಸುಖಿಗಳಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ. ಆದರೆ ಇಂದು ​ಒಂದನೇ ತರಗತಿಯಿಂದಲೇ ಇಂಗ್ಲಿಷ್​ ಮಾಧ್ಯಮದಲ್ಲಿ ಕಲಿಸಲಾಗುತ್ತದೆ. ಬುದ್ಧಿವಂತ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ. ಸಾಧಾರಣ ಮಕ್ಕಳಿಗೆ ಇಂಗ್ಲಿಷ್​ ಶಿಕ್ಷಣ ಕಬ್ಬಿಣದ ಕಡೆಲೆಯಂತಾಗಿ ಗಲಿಬಿಲಿಗೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಹಿನ್ನಡೆಯಾಗಿದೆ ಎಂದು ಮಕ್ಕಳ ​ಸಾಹಿತಿ ಇಂದಿರಾ ಹಾಲಂಬಿ -ಹೇಳಿದರು.

ಸಂಸತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್​ ಗೋಲ್ಡ್​ ಅಂಡ್​ ಡೈಮಂಡ್ಸ್​ ಆಶ್ರಯದಲ್ಲಿ​ ನೀಡಿದ ಮಲಬಾರ್​ ವಿಶ್ವಸಾಹಿತ್ಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ವಿಶ್ವಸಾಹಿತ್ಯ ಪುರಸ್ಕಾರ ಪಡೆದ ಸಾಹಿತಿ ಡಾ. ಬೈರಮಂಗಲ ರಾಮೇಗೌಡ -, ಮಾಜಿ ರಾಷ್ಟ್ರಪತಿ ಅಬ್ದುಲ್​ ಕಲಾಂ ಶಿಷ್ಟಾಚಾರ ಅಧಿಕಾರಿ, ಲೇಖಕ ಜಯಪ್ರಕಾಶ್​ ಪುತ್ತೂರು ಮಾತನಾಡಿದರು. ನಾಡೋಜ ಪ್ರೊ. ಕೆ. ಪಿ. ರಾವ್​ ಸಭಾಧ್ಯಕ್ಷತೆ ವಹಿಸಿದ್ದರು, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ. ನಿರಂಜನ ಚೋಳಯ್ಯ, ಉದ್ಯಮಿ ವಿಶ್ವನಾಥ ಶೆಣೈ, ವಿಶ್ವಸಂಸತಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್​, ಮಲಬಾರ್​ ಗೋಲ್ಡ್​ ಶಾಖಾ ಮುಖ್ಯಸ್ಥ ವಿಜಯಕುಮಾರ್​, ಸಂಧ್ಯಾ ಶೆಣೈ ಉಪಸ್ಥಿತರಿದ್ದರು.

ಪ್ರತಿಷ್ಠಾನ ಕಾರ್ಯದರ್ಶಿ ರವಿರಾಜ್​ ಎಚ್​.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್​ ಸ್ವಾಗತಿಸಿದರು. ರಾಜೇಶ್​ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version