Site icon ಉಡುಪಿ ನ್ಯೂಸ್ ಪ್ಲಸ್

ಮೂಳೂರಿನಲ್ಲಿ ಕೈರಂಪನಿಗೆ ಬಿದ್ದ ಬೃಹತ್ ಗಾತ್ರದ ತೊರಕೆ ಮೀನುಗಳು.

ಶುಕ್ರವಾರ ಹಾಗೂ ಶನಿವಾರ ಮೂಳೂರು ಕಡಲ ತೀರದಲ್ಲಿ ಏರ್ಮಾಳಿನ ಕೈರಂಪಣಿ ಮೀನುಗಾರಿಕೆ ಸಂದರ್ಭ ಬೃಹತ್ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿದೆ. ತಲಾ 15 ರಿಂದ 40 ಕಿಲೋ ತೂಕದ ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿದ್ದು, ಈ ತೋರಕೆ ಮೀನುಗಳು ಕಿಲೋವೊಂದಕ್ಕೆ ೨೫೦ ರೂ ನಿಂದ ೩೦೦ ರೂ ಬೆಲೆ ಬಾಳುತ್ತದೆ. ಹೇರಳವಾಗಿ ಸಿಕ್ಕ ತೊರಕೆ ಮೀನಿನಿಂದಾಗಿ ಮೊಗವೀರರ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಮೀನನ್ನು ನೋಡಲೆಂದು ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿದ್ದರು.

Exit mobile version