Site icon ಉಡುಪಿ ನ್ಯೂಸ್ ಪ್ಲಸ್

ಅಕ್ಟೋಬರ್ 21ರಂದು ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ‘ಕಾಪು’ ಶಾಖೆ ಶುಭಾರಂಭ

“ಗುರುವಾಯನಕೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಸಿದ್ಧ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ಸೇವಾ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಅಕ್ಟೋಬರ್ 21ರಂದು ಕಾಪುವಿನಲ್ಲಿ ನೂತನ ಶಾಖೆಯನ್ನು ಅಧಿಕೃತವಾಗಿ ಕಾಪು ಮಂಜುಶ್ರೀ ಏನ್ ಕ್ಲೇವ್ ನಲ್ಲಿ .ಉದ್ಘಾಟಿಸಲಿದೆ

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿ ಸಲಿದ್ದು, ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಬಿಲ್ಲವರ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಕಾಪು ಮೊಗವೀರ ಮಹಾಸಭಾ ಅಧ್ಯಕ್ಷ ಸುಜಿತ್ ಕುಮಾರ್, ಕಾಪು ಪೊಲಿಪು ಶೇಖ್ ಜಾಮಿಯಾ ಮಸೀದಿ ಅಧ್ಯಕ್ಷ ನಝೀ‌ರ್ ಅಹಮ್ಮದ್, ಕಾಪು ಮಂಜುಶ್ರೀ ಏನ್ ಕ್ಲೇವ್ ಕಟ್ಟಡ ಮಾಲಕ ಪ್ರಸಾದ್ ಎಸ್. ಕಾಮತ್ ಭಾಗವಹಿಸಲಿದ್ದಾರೆ ಎಂದು ವಿಜಯ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ಹಾಗೂ ಸಿಇಒ ಸುಜಯ್ ಶೆಟ್ಟಿ ತಿಳಿಸಿದ್ದಾರೆ

Exit mobile version