Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ ಉಚ್ಚಿಲ ದಸರಾ 2026: ನಾಡೋಜ ಡಾ. ಜಿ. ಶಂಕರ್‌ ಅವರಿಂದ ಭವ್ಯ ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಅಕ್ಟೋಬರ್ 10ರ ಶನಿವಾರ ಸಂಜೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ವಿದ್ಯುದ್ದೀಪಾಲಂಕಾರವನ್ನು ನಾಡೋಜ ಡಾ. ಜಿ. ಶಂಕರ್‌ ಅವರು ಬಟನ್ ಒತ್ತುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಇದರೊಂದಿಗೆ ಪಡುಬಿದ್ರಿಯಿಂದ ಕಾಪು ಕಡಲತೀರದವರೆಗೆ ಇಡೀ ಪರಿಸರವು ರಂಗುರಂಗಿನ ಬೆಳಕಿನ ನಗರಿಯಾಗಿ ಕಂಗೊಳಿಸುತ್ತಿದೆ

ಉದ್ಘಾಟನೆಯ ಪೂರ್ವಭಾವಿಯಾಗಿ ಪೂಜಾ ವಿಧಿಯನ್ನು ದೇವಳದ ಪ್ರಧಾನ ಅರ್ಚಕ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ಶ್ರೀನಿವಾಸ ಉಪಾಧ್ಯಾಯ ನೆರವೇರಿಸಿದರು.ವಿದ್ಯುತ್‌ ದೀಪಾಲಂಕಾರದ ಗುತ್ತಿಗೆದಾರ ಅನಿಲ್‌ ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ-ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ ,ಉಡುಪಿ ಶಾಸಕ ಯಶಪಾಲ್ ಸುವರ್ಣ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, , ಮೋಹನ್ ಬೇಂಗ್ರೆ, ಶ್ರೀಪತಿ ಭಟ್‌ ಉಚ್ಚಿಲ, ದಿನೇಶ್‌ ಎರ್ಮಾಳು, ಮನೋಜ್ ಕಾಂಚನ್, ಸತೀಶ್ ಕುಂದರ್ ಮಲ್ಪೆ, ವಾಸುದೇವ ಸಾಲ್ಯಾನ್‌, ಗುಂಡು ಬಿ ಅಮೀನ್‌, ರತ್ನಾಕರ ಸಾಲ್ಯಾನ್ ಮಲ್ಪೆ, ವಿಶ್ವಾಸ್‌ ಅಮೀನ್‌, ಉಪಸ್ಥಿತರಿದ್ದರು.

Exit mobile version