Site icon ಉಡುಪಿ ನ್ಯೂಸ್ ಪ್ಲಸ್

​ಸಂಗೊಳ್ಳಿ ರಾಯಣ್ಣ ಪುರಸ್ಕಾರ ಸಮಾರಂಭ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ.ಕ, ಉಡುಪಿ ಜಿಲ್ಲೆ ಆಶ್ರಯದಲ್ಲಿ ಸಂಗೊಳ್ಳಿ ರಾಯಣ್ಣ ಪುರಸ್ಕಾರ ಸಮಾರಂಭ 11 ಅಕ್ಟೋಬರ್ 2026, ಭಾನುವಾರ ಸಂಜೆ ಗಂಟೆ 4.30 ರಿಂದ ಯಕ್ಷಗಾನ ಕಲಾರಂಗ ಐ ವೈ ಸಿ ಹವಾ ನಿಯಂತ್ರಿತ ಸಭಾಂಗಣ, ಶಾರದಾ ಮಂಟಪ ರಸ್ತೆ ಕುಂಜಿಬೆಟ್ಟು, ಉಡುಪಿ ಇಲ್ಲಿ ನಡೆಯಲಿದೆ.
​

ಈ ಬಾರಿ ಖ್ಯಾತ ಸಂಘಟಕ, ರಂಗ ಕರ್ಮಿ , ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ
ಯವರನ್ನು ಆಯ್ಕೆ ಮಾಡಲಾಗಿದೆ. ಸಂಜೆ 4.30 ರಿಂದ 5.00 ವರೆಗೆ ರಾಜೇಶ್ ಶಾನ್ ಭೋಗ್ ಖ್ಯಾತ ಗಾಯಕರು, ಬಾರಕೂರು (ಪಿ. ಕಾಳಿಂಗ ರಾವ್ ಮೊಮ್ಮಗ ) ಇವರಿಂದ ಸುಮಧುರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಬಳಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅಧ್ಯಕ್ಷರು, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ.ಕ, ಉಡುಪಿ ಜಿಲ್ಲೆ ಇವರು ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ಅಭೀದ್ ಗದ್ಯಾಳ್, ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ನೆರವೇರಿಸಲಿದ್ದಾರೆ. ​ಪ್ರಶಸ್ತಿ ಪ್ರದಾನವನ್ನು ಸುರೇಶ್ ಗೋಕಾಕ್, ಸಂಸ್ಥಾಪಕರು – ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ (ರಿ.) ಕರ್ನಾಟಕ ಮಾಡಲಿದ್ದಾರೆ. ರಾಯಣ್ಣ ಮೂರ್ತಿಗೆ ಕ್ಷೀರಾಭಿಷೇಕವನ್ನು ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು ಮತ್ತು ಖ್ಯಾತ ಉದ್ಯಮಿ ಹಾಗು ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಡಾ. ಹರಿಶ್ಚಂದ್ರ, ಸಂಸ್ಥಾಪಕರು, ಗಾಂಧಿ ಆಸ್ಪತ್ರೆ ಉಡುಪಿ ನಡೆಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪೂರ್ಣಿಮಾ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ,
ಶ್ರೀ ವಿಶ್ವನಾಥ ಶೆಣೈ, ಸ್ಥಾಪಕರು, ಸಂಸ್ಕೃತಿ ವಿಶ್ವ ಪ್ರತಿಸ್ಥಾನ, ಉಡುಪಿ, ಕುಮಾರ್ ಪ್ರಸಾದ್, ಕಾರ್ಯಾಧ್ಯಕ್ಷರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಉಡುಪಿ ಜಿಲ್ಲೆ, ಲಕ್ಷ್ಮಣ್ ಕೋಲ್ಕಾರ್, ಉಪಾಧ್ಯಕ್ಷರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಉಡುಪಿ ಜಿಲ್ಲೆ ಇವರೆಲ್ಲರು ಭಾಗವಹಿಸಲಿದ್ದಾರೆ. ಸಾಹಿತಿಗಳು\ ಉರಗ ತಜ್ಞರಾದ ಗುರುರಾಜ್ ಸನಿಲ್ ಅಭಿನಂದನಾ ಮಾತಗಳನ್ನಾಡಲಿ​ದ್ದಾ ರೆ. ತಾವೆಲ್ಲರು ಆಗಮಿಸಿ ಕಾರ್ಯಕ್ರಮವನ್ನು ಪ್ರಚಾರ ಮಾಡಿ ಯಶಸ್ವಿಗೊಳಿಸ ಬೇಕಾಗಿ ವಿನಂತಿ
​
ಉಪಸ್ಥಿತಿ:​ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ​, ಲಕ್ಷ್ಮಣ್ ಕೋಲ್ಕಾರ್​, ಕುಮಾರ್ ಪ್ರಸಾದ್​, ಬಸವರಾಜ್ ಐಹೊಳೆ​, ಕಾಳಪ್ಪ ಹರಗಿ

Exit mobile version