Site icon ಉಡುಪಿ ನ್ಯೂಸ್ ಪ್ಲಸ್

ಸೆಪ್ಟೆಂಬರ್ 13ರಂದು ಕಾಪುವಿನಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ

ಜೇಸಿಐ ಕಾಪು ವತಿಯಿಂದ ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ಆಯೋಜನೆ

ಕಾಪು : ವರ್ಷಂಪ್ರತಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜೇಸಿಐ ಕಾಪು ಘಟಕದಿಂದ ಜರಗುವ ಮುದ್ದು ಕೃಷ್ಣ ವೇಷ ಸ್ಪರ್ಧೆ, ಈ ಬಾರಿ “ಸಂಚಲನ” ಜೇಸಿ ಸಪ್ತಾಹ – 2026ರ ಅಂಗವಾಗಿ ಸೆಪ್ಟೆಂಬರ್ 13ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ 3 ವರ್ಷಕ್ಕಿಂತ ಕೆಳಗಿನವರ ವಿಭಾಗ ಮತ್ತು LKG,UKG, ಅಂಗನವಾಡಿ ವಿಭಾಗದ ಸ್ಪರ್ಧೆ ಜರಗಲಿದೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ 3,333/- ದ್ವಿತೀಯ ರೂ 2,222/- ತೃತೀಯ ರೂ 1,111/- ಹಾಗೂ ಶಾಶ್ವತ ಫಲಕ ಮತ್ತು ಪ್ರಮಾಣ ಪತ್ರವನ್ನು ಕಾರ್ಯಕ್ರಮದ ಪ್ರಾಯೋಜಕರಾದ ದಿವಂಗತ ಜೇಸಿ ಜಗದೀಶ್ ಆಚಾರ್ಯ ಅವರ ಸ್ಮರಣಾರ್ಥ ಜಯಲಕ್ಷ್ಮಿ ಜ್ಯುವೆಲರ್ಸ್ ಕಾಪು ಅವರು ನೀಡಲಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು ಒಂದು ದಿನ ಮುಂಚಿತವಾಗಿ ತಮ್ಮ ಮಕ್ಕಳ ಹೆಸರನ್ನು ನೊಂದಾವಣೆ ಮಾಡಬೇಕೆಂದು ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಮತ್ತು ಸಪ್ತಾಹದ ಯೋಜನಾ ಮಹಾ ನಿರ್ದೇಶಕ ಕಾರ್ತಿಕ್ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version