Site icon ಉಡುಪಿ ನ್ಯೂಸ್ ಪ್ಲಸ್

ಜನಪ್ರತಿನಿಧಿ ಚೇಲಾಗಳಿಗೇ…… ಸಬ್ಸಿಡಿ ಸಾಲ : ದಲಿತ ಮಹಿಳೆಯರ ಆಕ್ರೋಶ.

ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ….. ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಒಂದುಸಲ ದಿನದ ಕೌಶಲಾಭಿವ್ರಧ್ಧಿ ಮತ್ತು ಮಾಹಿತಿ ಕಾರ್ಯಾಗಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಶಂಕರ್ ಮಲ್ಲಾರ್ ರವರು ಮಾಹಿತಿ ನೀಡುತ್ತಾ ಹಲವು ಯೋಜನೆಗಳ ಬಗ್ಗೆ ವಿವರಿಸಿದರು ಉಡುಪಿ ಜಿಲ್ಲೆಗೆ ಕೇವಲ 79 ಲಕ್ಷ ರೂಪಾಯಿಯ ಯೋಜನೆಗಳು ಬಂದಿದ್ದು ಅದನ್ನು ಯಾರಿಗಂತ ಕೊಡುವುದು , ಎಷ್ಟಂತ ಕೊಡುವುದು ಎಂದು ತನ್ನ ಅಸಾಯಕತೆಯನ್ನು ವ್ಯಕ್ತ ಪಡಿಸಿದರು.
ಆದರೆ ನಮ್ಮವರು ಎಷ್ಟು ಸಲ ಅರ್ಜಿ ಹಾಕಿದರೂ ಸಾಲ ಸಿಗುತ್ತಿಲ್ಲಾ ಒಂದೋ ನಿಮ್ಮ ಆಫೀಸಿನಲ್ಲಿ ತಿರಸ್ಕರಿಸಲಾಗುತ್ತದೆ….. ಇಲ್ಲದಿದ್ರೆ ಬ್ಯಾಂಕ್ ನಲ್ಲಿ ತಿರಸ್ಕರಿಸಲಾಗುತ್ತದೇ ಎಂದರು. ಇಷ್ಟಕ್ಕೇ ಸುಮ್ಮನಾಗದ ದಲಿತ ಮಹಿಳೆಯರು ನೀವು ಕೇವಲ ಎಮ್. ಎಲ್. ಎ. , ಜನಪ್ರತಿನಿದಿನಗಳ ಚೇಲಾಗಳಿಗಷ್ಟೇ ಸಾಲ ಕೊಡುತ್ತೀರಿ….. ಕೊಟ್ಟ ಮನೆಯವರಿಗೇ ಮತ್ತೆ ಮತ್ತೆ ಸಾಲ ಕೊಡುತ್ತೀರೀ ಎಂದು ಅಕ್ರೋಶ ಗದ್ದಲ ಎಬ್ಬಿಸಿದರು……. ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಅವರು ಮಹಿಳೆಯರನ್ನು ಸಮಾಧಾನ ಪಡಿಸಿದರು.
ಉಡುಪಿ ಅಪರ ಜಿಲ್ಲಾಧಿಕಾರಿಯವರಾದ ಅಬಿದ್ ಗದ್ಯಾಲ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಮಹಿಳೆಯರು ಧನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಇದು ನನ್ನಿಂದ ಸಾಧ್ಯ , ನಾನು ಮಾಡಬಲ್ಲೇ ಅನ್ನುವ ಮನೋಬಲ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ಅದು ಬಿಟ್ಟು ಋಣಾತ್ಮಕ ಮನೋಭಾವನೆ ಬೆಳೆಸಿಕೊಂಡು ಇದು ನನ್ನಿಂದ ಸಾಧ್ಯವೇ ಎಂಬ ಅಪನಂಬಿಕೆ ಇದ್ದರೇ….. ಎಲ್ಲವೂ ಅಸಾಧ್ಯ ಎಂದರು.
ಬ್ರಹ್ಮಾವರ ರುಡ್ ಸೆಟ್ ಕೇಂದ್ರದ ಮುಖ್ಯ ಪ್ರಬಂಧಕರಾದ ಡಾಕ್ಟರ್. ಎಮ್. ಬೊಮ್ಮಯ್ಯ ಮಾತನಾಡುತ್ತಾ ಮಹಿಳೆಯರು ಸ್ವಾವಲಂಬಿಗಳಾಗಬೇಕು….ಬಾಬಾಸಾಹೇಬ್ ಅಂಬೇಡ್ಕರ್ ರವರು ಮಹಿಳೆಯವರಿಗೋಸ್ಕರವೇ ಸಂವಿಧಾನ ಬರೆದರು……. ಇಡೀ ದೇಶದ ಎಲ್ಲಾ ಜಾತಿ, ಧರ್ಮದ ಮಹಿಳೆಯರಿಗೋಸ್ಕರ ಸಂವಿಧಾನ ಬರೆದರು. ಆದರೆ ದುರಾಧ್ರಷ್ಟ ಇದು ಹೆಚ್ಚಿನ ಮಹಿಳೆಯರಿಗೆ ಗೊತ್ತಿಲ್ಲ….. ಬಾರತದ ಎಲ್ಲಾ ಜಾತಿ…. ಎಲ್ಲಾ ಧರ್ಮದ ಮಹಿಳೆಯರ ಬಿಡುಗಡೆಗೋಸ್ಕರವೇ ಅಂಬೇಡ್ಕರ್ ರವರು ಹಿಂದು ಕೋಡ್ ಬಿಲ್ಲನ್ನು ಮಂಡಿಸಿದರು. ಆದರ ಧೌರ್ಭಾಗ್ಯ ಏನೆಂದರೆ ಈ ಬಿಲ್ ಪಾಸಾಗಲಿಲ್ಲಾ……ಹಿಂದು ಕೋಡ್ ಬಿಲ್ ಪಾಸಾಗಲಿಲ್ಲಾ ಎಂದು ತನ್ನ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರಬಂದ ಏಕೈಕ ಮಂತ್ರಿ ನಮ್ಮ ಅಂಬೇಡ್ಕರ್ ರವರು ಎಂದರು.
ಇನ್ನು ಮುಂದುವರಿಸುತ್ತಾ ನೀವು ಇನ್ನೂ ಸಹ ಯಾಕೆ ಸಬ್ಸಿಡಿ ಸಾಲಕ್ಕೋಸ್ಕರ ಕಾಯುತ್ತಿರೀ ನಮ್ಮಲ್ಲಿಗೆ ನಾವು 70 ರೀತಿಯ ತರಬೇತಿ ಕೊಡ್ತೇವೆ. ತರಬೇತಿಯೊಂದಿಗೆ ನಿಮಗೆ ಸರ್ಟಿಫಿಕೇಟ್ ಕೊಟ್ಟು ಸಾಲ ಸೌಲಭ್ಯವನ್ನೂ ತೆಗೆಸಿಕೊಡುತ್ತೇವೆ…… ಯಾರಿಗೂ ದಮ್ಮಯ್ಯ ಹೊಡೆಯುವ ಅಗತ್ಯವೇ ಇಲ್ಲಾ…… ಎಲ್ಲರೂ ಸ್ವ ಉಧ್ಯೋಗ ಮಾಡಿ ಬಧುಕು ಕಟ್ಟಿಕೊಳ್ಳಿ ಎಂದರು.
ಸ್ವ ಉಧ್ಯೋಗದ ನೇರ ಪ್ರಾತಕ್ಷಿಕೆ ನಡೆಸಿ ಕೊಟ್ಟ ಪ್ರಮೀಳ ಬಾರ್ಕೂರು ಅವರು ಸ್ಥಳದಲ್ಲೇ ಸಾಬೂನು ತಯಾರಿಸಿ ಮಹಿಳೆಯರಿಗೆ ಮಾಹಿತಿ ನೀಡಿದರು.
ಸುಂದರ ಗುಜ್ಜರ್ ಬೆಟ್ಟು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಆರಂಭದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಎಲ್ಲರನ್ನೂ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಪ್ರಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಸಂಘಟನೆ ಮಹತ್ವ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ್ ವಂದಿಸಿದರು.

Exit mobile version