Site icon ಉಡುಪಿ ನ್ಯೂಸ್ ಪ್ಲಸ್

80 ಬಡಗಬೆಟ್ಟು ಬಿಜೆಪಿ ಮಹಾಶಕ್ತಿಕೇಂದ್ರ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ : ಶಾಸಕ ಲಾಲಾಜಿ ಮೆಂಡನ್

ಇಂದು ಪರ್ಕಳ ಸುರಕ್ಷಾ ಸಭಾಭವನದಲ್ಲಿ ಬಿಜೆಪಿ ಮಹಾಶಕ್ತಿಕೆಂದ್ರ 80 ಬಡಗಬೆಟ್ಟು, ಮಹಾಶಕ್ತಿಕೇಂದ್ರ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ ಉಡುಪಿ ಸಹಯೋಗದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಯವರ 72 ನೇ ಜನ್ಮದಿನ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಯ ರವರ ಜನ್ಮ ಜಯಂತಿ ನಿಮಿತ್ತ ಬೃಹತ್ ರಕ್ತದಾನ ಶಿಬಿರವನ್ನು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಮಾಜಿ ಸದಸ್ಯರು ಶ್ಯಾಮಲಾ ಕುಂದರ್, 80 ಬಡಗಬೆಟ್ಟು ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ನಾಯಕ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಉಪೇಂದ್ರ ನಾಯಕ್, ಕೊಡಿಬೆಟ್ಟು ಪಂಚಾಯತ್ ಉಪಾಧ್ಯಕ್ಷರು ಸದಾನಂದ ಪ್ರಭು, ಜಿಲ್ಲಾ ರಕ್ತನಿಧಿ ವಿಭಾಗ ವೈದ್ಯಾಧಿಕಾರಿ ಡಾ. ವೀಣಾ, ಪಕ್ಷದ ಸ್ಥಳೀಯ ಮುಖಂಡರು ಶುಭಕರ್ ಶೆಟ್ಟಿ, ಕೇಶವ ಕೋಟ್ಯಾನ್, ಅನಂತಪದ್ಮನಾಭ ಹಾಗೂ ಕಾರ್ಯಕರ್ತರು, ಗ್ರಾಮಸ್ಥರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು

Exit mobile version