Site icon ಉಡುಪಿ ನ್ಯೂಸ್ ಪ್ಲಸ್

ಉಚ್ಚಿಲ ದಸರಾ ಉತ್ಸವದ ಪೂರ್ವ ಭಾವಿಯಾಗಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ವಿದ್ಯುತ್ ದೀಪ ಅಲಂಕಾರದ ಉದ್ಘಾಟನೆ ಯನ್ನು ನಾಡೋಜ ಜಿ.ಶಂಕರ್‌ ರವರು ನೆರವೇರಿಸಿದರು

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ದ ದಸರಾ ಉತ್ಸವದ ಪೂರ್ವ ಭಾವಿಯಾಗಿ
ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸುಮಾರು ೧೭ ಕಿಮೀ ಉದ್ದಕ್ಕೆ ವಿದ್ಯುತ್ ದೀಪ ಅಲಂಕಾರದ ಉದ್ಘಾಟನೆ ಯನ್ನು ನಾಡೋಜ ಜಿ.ಶಂಕರ್‌ ರವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸಪ್ಟೆಂಬರ್ ೨೬ ರಿಂದ ಅಕ್ಟೋಬರ್ ೫ ರವರೆಗೆ ಉಚ್ಚಿಲ ದಸರಾ ಉತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ.ಕರ್ನಾಟಕದ ಇತರ ಕಡೆಗಳಲ್ಲಿ ಜರಗುವಂತೆ ಇಲ್ಲಿ ಕೂಡ ಅತ್ಯಂತ ವಿಜ್ರಂಬಣೆಯಿಂದ ದಸರಾ ಆಚರಿಸಲು ನಮ್ಮ ಕಮಿಟಿ ಎಲ್ಲ ಏರ್ಪಾಟು ಮಾಡಿದ್ದಾರೆ. ಪ್ರತಿದಿನ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡಾ ಇರುತ್ತದೆ. ವಿದ್ಯುತ್ ಅಲಂಕಾರ ಸಾಂಕೇತಿಕ ವಾಗಿ ಇಂದು ಉದ್ಘಾಟನೆ ಮಾಡಿದ್ದೇವೆ. ಜಲಸ್ತಂಭನ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನವದುರ್ಗೆಯರ ಹಾಗೂ ಶಾರದಾ ಮೂರ್ತಿ ಗಳನ್ನು ಇಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹೆಜಮಾಡಿ ತನಕ ಹೋಗಿ ವಾಪಾಸು ಕಾಪು ತನಕ ಟ್ಯಾಬ್ಲೋ ಸಹಿತ ಮೆರವಣಿಗೆಯ ಮ‌ೂಲಕ ಕಾಪು ತನಕ ಹೋಗಿ ದೀಪಸ್ತಂಭ ದ ಬಳಿ ಸಮುದ್ರ ದಲ್ಲಿ ಜಲಸ್ಥಂಭನೆ ಮಾಡಲಾಗುವುದು ಎಂದುಮಾಹಿತಿ ನೀಡಿದರು.

 

video link subscribe

https://youtu.be/eRdAxS5lk18

Exit mobile version