
ಕಾಪು ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪುರಸಭೆಯ ಪೌರ ಕಾರ್ಮಿಕರ ಸಹಿತ ೩೫ ಮಂದಿಗೆ ಸನ್ಮಾನ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ ಆಯೋಜನೆ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಪುರಸಭೆ ಮುಖ್ಯಾಧಿಕಾರಿ, ಪುರಸಭೆ ಸದಸ್ಯರ ಸಹಿತ ಗಣ್ಯರ ಉಪಸ್ಥಿತಿ
ಬಿಸಿಲು, ಗಾಳಿ, ಮಳೆ, ಚಳಿಯನ್ನು ವರ್ಷಪೂರ್ತಿ ನಗರ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುವ ಮತ್ತು ಕಸ ತ್ಯಾಜ್ಯ ಸಂಗ್ರಹಣೆ ಹಾಗೂ ಘನ ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿಯಲ್ಲಿ ತೊಡಗಿಕೊಂಡು ಸದಾ ಬ್ಯುಸಿಯಾಗಿ ಬಿಡುವ ಕಾಪು ಪುರಸಭೆ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಶುಕ್ರವಾರ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪುರಸಭೆಯ ಎಲ್ಲಾ ಪೌರ ಕಾರ್ಮಿಕರನ್ನು ಸಮ್ಮಾನಿಸಲಾಯಿತು. ವಿವಿಧ ಮನೋರಂಜನೆ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮಾತನಾಡಿ, ಪೌರ ಕಾರ್ಮಿಕರ ಪ್ರಾಮಾಣಿಕ ಸೇವೆಯಿಂದಾಗಿ ಕಾಪು ಪುರಸಭೆಗೆ ವಿಶೇಷ ಗೌರವ ಸಿಗುವಂತಾಗಿದೆ. ಸಮಾಜದ ಜನರ ಜೊತೆಗಿದ್ದು ಸ್ವಚ್ಛತೆಗಾಗಿ ನಿರಂತರವಾಗಿ ನಿಸ್ವಾರ್ಥ ಸೇವೆಗೈಯ್ಯುತ್ತಿರುವ ಪೌರ ಕಾರ್ಮಿಕರನ್ನು ಅವಮಾನಿಸದೇ ಅವರನ್ನು ಗುರುತಿಸಿ, ಗೌರವಿಸುವುದೇ ನಾವು ಅವರಿಗೆ ನೀಡಬಹುದಾದ ವಿಶೇಷ ಗೌರವವಾಗಿದೆ ಎಂದರು. ಕಾಪು ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಅರುಣ್ ಶೆಟ್ಟಿ ಪಾದೂರು ಶುಭಾಶಂಸನೆಗೈದರು. ಕಾಪು ಪುರಸಭೆ ಸದಸ್ಯರು, ಅಽಕಾರಿ ವರ್ಗದವರು ಉಪಸ್ಥಿತರಿದ್ದರು.
ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಸುರೇಶ್ ದೇವಾಡಿಗ, ರತ್ನಾಕರ ಶೆಟ್ಟಿ, ನೂರುದ್ದೀನ್, ಶೈಲೇಶ್ ಅಮೀನ್, ಉಮೇಶ್ ಪೂಜಾರಿ, ಸತೀಶ್ಚಂದ್ರ, ನಾಗೇಶ್, ಸರಿತಾ ಪೂಜಾರಿ, ರಾಧಿಕಾ ಸುವರ್ಣ, ಫರ್ಜಾನ, ಶೋಭಾ ಬಂಗೇರ, ಹರಿಣಾಕ್ಷಿ ದೇವಾಡಿಗ, ವಿದ್ಯಾಲತಾ, ಲತಾ ದೇವಾಡಿಗ, ಮೋಹಿನಿ ಶೆಟ್ಟಿ, ರೂಪುಸ್ ಶಾಬು ಸಾಹೇಬ್, ಸರಿತಾ ಶಿವಾನಂದ್ ಉಪಸ್ಥಿತರಿದ್ದರು.
video link subscribe
