ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ s ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ. ವಿಭಾಗ, ಜಿಲ್ಲಾ ಸರ್ವಶಿಕ್ಷಣ ಘಟಕ ಎನ್.ಸಿ.ಡಿ. ಉಡುಪಿ, ಕಮ್ಯುನಿಟಿ ಮೆಡಿಸಿನ್ ವಿಭಾಗ ಕೆ.ಎಮ್.ಸಿ. ಮಣಿಪಾಲ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ನಿ.) ಬೆಂಗಳೂರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ (ನಿ.) ರೋಟರಿ ಕ್ಲಬ್ ಪಡುಬಿದ್ರಿ ಇವರ ಜಂಟಿ ಸಹಯೋಗದಲ್ಲಿ
ಕೇಂದ್ರ ಸಹಕಾರ ಇಲಾಖೆ 5 ವರ್ಷ ಪೂರ್ಣ
ಗೊಳಿಸುತ್ತಿರುವ ಪ್ರಯುಕ್ತ “ಸಹಕಾರ ಸಮೃದ್ಧಿ ಎಂಬ ಧೈಯವಾಕ್ಯದೊಂದಿಗೆ” ಸಹಕಾರ ಸಪ್ತಾಹ ಆಚರಣೆ 2026 ರ ಅಂಗವಾಗಿ ಇಂದು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವಠಾರದಲ್ಲಿ
`ಸ್ತನ ಹಾಗೂ ಗರ್ಭ ಕಂಠ ಕ್ಯಾನ್ಸರ್ ತಪಾಸಣಾ ಶಿಬಿರ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷಣಾ ಶಿಬಿರ ಕಣ್ಣಿನ ತಪಾಸಣೆ ಶಿಬಿರವು ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ, ಮಹಾಗಣಪತಿ ಸಂಜೀವಿನಿ ಒಕ್ಕೂಟ ಪಡುಬಿದ್ರಿ ಸಹಕಾರದೊಂದಿಗೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರೊ. ಡಾ. ಪಯಸ್ವಿನಿ ಶೆಟ್ಟಿಗಾರ್ ದುರ್ಗಾ ಕ್ಲಿನಿಕ್, ಪಡುಬಿದ್ರಿ ಇವರು ನಡೆಸಿಕೊಟ್ಟರು.
ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿ ಒಂಭತ್ತು ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಇರುವುದು ಕಂಡುಬಂದಿದೆ.ಇದರಲ್ಲಿ ಬಹು ಮುಖ್ಯವಾಗಿ ಸ್ತ್ರೀ ಮತ್ತು ಗಂಡಸರು ಪ್ರತಿಶತ 27 ರಷ್ಟು ಜನ ಸ್ತನ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಿಂದೆ ಬಳಲುತ್ತಿದ್ದಾರೆ.
ಕ್ಯಾನ್ಸರ್ ನ್ನು ಮೊದಲ ಹಂತದಲ್ಲೇ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಡುಬಿದ್ರಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜಶ್ರೀ ಕಿಣಿ ಅವರು
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಎನ್ನುವುದು ಸರ್ವೇ ಸಾಮಾನ್ಯ ಇದಕ್ಕೆ ಕಾರಣ ಜನರು ಪರೀಕ್ಷಿಸಲು ಹಿಂದೇಟು ಹಾಕುವುದು.
ಇದರಿಂದ ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿ ಸಮಸ್ಯೆ ಉಲ್ಬಣ ಗೊಂಡು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗದೆ ಇರುವುದು ಕಂಡುಬರುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ.
ಅಧ್ಯಕ್ಷರಾದ
ಶ್ರೀ ವೈ ಸುಧೀರ್ ಕುಮಾರ್ ವಹಿಸಿ ಸಾರ್ವಜನಿಕರು ಆರೋಗ್ಯ ಶಿಬಿರದ ಪ್ರಯೋಜನವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಆರೋಗ್ಯ ಶಿಬಿರದಲ್ಲಿ
ನೂರ ಮೂವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ತಪಾಸಣೆ ಮಾಡಿಸುವ ಮೂಲಕ ಪ್ರಯೋಜನ ಪಡೆದು ಕೊಂಡರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ,
ಡಾ. ರಾಜಶ್ರೀ ಕಿಣಿ,
ಪಡುಬಿದ್ರಿ ರೋಟರಿ ಕ್ಲಬ್,
ನಿಕಟ ಪೂರ್ವ ಅಧ್ಯಕ್ಷರಾದ
ರೊ.ಸುನಿಲ್ ಕುಮಾರ್,
ಕೆ.ಎಂ.ಸಿ ವೈದ್ಯೆ ಸಂಚಿತಾ, ಇಂಡಿಯನ್ ಕ್ಯಾನ್ಸರ್ ಕ್ಯಾಂಪಿನ ಸಂಯೋಜಕಿ ಸುನಿತಾ, ರೊ.ಜ್ಯೋತಿ ಮೆನನ್, ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಶುಭಾ,
ಮಹಾಗಣಪತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸವಿತಾ ಆಚಾರ್ಯ
ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ
ಶ್ರೀ ಅಶೋಕ್ ಕುಮಾರ್ ಬಲ್ಲಾಳ್,
ಮುಖ್ಯ ಕಾರ್ಯ
ನಿರ್ವಾಹಣಾಧಿಕಾರಿ
ಶ್ರೀಮತಿ ನಿಶ್ಮಿತಾ ಪಿ.ಎಚ್,
ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅನುಷಾ ಕೋಟ್ಯಾನ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ
ನಿರ್ದೇಶಕರು ಹಾಗೂ ಸಿಬ್ಬಂದಿ ವೃಂದದವರು
ಮತ್ತು ಶಿಬಿರದ ಫಲಾನುಭವಿಗಳು
ಉಪಸ್ಥಿತರಿದ್ದರು.
ಶ್ರೀಮತಿ ನಿಶ್ಮಿತಾ ಪಿ.ಎಚ್, ಧನ್ಯವಾದ ಸಮರ್ಪಿಸಿದರು.
ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅನುಷಾ ಕೋಟ್ಯಾನ್, ನಿರೂಪಣೆ ಮಾಡಿದರು.
