ಉಡುಪಿ ನ್ಯೂಸ್ ಪ್ಲಸ್

ತೆಂಕ ಎರ್ಮಾಳು ಗ್ರಾಮ ಸಭೆಗೆ ತಡವಾಗಿ ಆಗಮಿಸಿ, ಸಮರ್ಪಕ ಮಾಹಿತಿ ನೀಡದ ಹೆದ್ದಾರಿ ಖಾಸಗಿ ಇಂಜಿನಿಯರ್ ಬೆವರಿಳಿಸಿದ ಗ್ರಾಮಸ್ಥರು

ತೆಂಕ ಎರ್ಮಾಳು ಗ್ರಾಮಸಭೆಯಲ್ಲಿ ಕಳೆದ ಬಾರಿ ನೀವು ನೀಡಿದ ಭರವಸೆಯ ಏನಾಯಿತು ಎಂದು ಕೇಳಿದ ಗ್ರಾಮಸ್ಥರ ಪ್ರಶ್ನೆಗೆ ಎಗರಾಡಿದ ಹೆದ್ದಾರಿ ಇಲಾಖಾ ಖಾಸಗಿ ಇಂಜಿನಿಯರ್ ಸಭೆಯಲ್ಲಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹತ್ತು ಗಂಟೆಗೆ ಆರಂಭವಾದ ಗ್ರಾಮಸಭೆಗೆ ಮಧ್ಯಾಹ್ನ ಒಂದುವರೆಗೆ ಆಗಮಿಸಿದ ಹೆದ್ದಾರಿ ಇಲಾಖಾ ಇಂಜಿನಿಯರ್  ಗ್ರಾಮಸ್ಥರ ಪ್ರಶ್ನೆಗೆ ಉಡಾಫೆಯಾಗಿ ಉತ್ತರಿಸಿದ್ದಾರೆ. ವಿಳಂಬವಾಗಿ ಆಗಮಿಸಿದ ಬಗ್ಗೆ ರೋಷದಲ್ಲಿದ್ದ ಗ್ರಾಮಸರು, ಇವರ ಉಢಾಪೆ ವರ್ತನೆಯಿಂದ ರೋಸಿ ಹೋಗಿ ತೀವ್ರ ಸಿಟ್ಟಾಗಿದ್ದಾರೆ. ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಉಪಾಧ್ಯಕ್ಷೆ ಜಯಶ್ರೀ ಪೂಜಾರಿ, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಅಭಿವೃದ್ಧಿ ಅಧಿಕಾರಿ ಸತೀಶ್, ಗ್ರಾಮಲೆಕ್ಕಿಗ ವಿಜಯ್, ಸದಸ್ಯರಾದ ಬಾಲಚಂದ್ರ, ಅರುಣಾ ಕುಮಾರಿ, ಕಿಶೋರ್, ಸುರೇಖಾ, ಸಂತೋಷ್, ಮನೋಜ್ ಮುಂತಾದವರಿದ್ದರು.

Exit mobile version