ಉಡುಪಿ ನ್ಯೂಸ್ ಪ್ಲಸ್

ಬ್ರಹ್ಮಾವರ ರೋಟರಿ ಕ್ಲಬ್ 2026-27 ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ

ದೇವರು ಗುಡಿಯಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾನೆ. ಆದ್ದರಿಂದ ಇನ್ನೊಬ್ಬರಿಗೆ ಸಹಕರಿಸುವುದು, ಸಮಾ ಜಕ್ಕೆ ಒಳಿತನ್ನು ಮಾಡುವುದೇ ಭಗ ವಂತನ ಆರಾಧನೆ ಎಂದು ಶ್ರೀ ಪೇಜಾ ವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಸಾಸ್ತಾನದ ಕೋಸ್ಟಲ್ ಪಾರಾಡೈಸ್‌ನಲ್ಲಿ ರೋಟರಿ ಜಿಲ್ಲೆ 3182 ನೂತನ ಗವರ್ನರ್ ಬಿ. ಎಂ. ಭಟ್ ಹಾಗೂ ಜಿಲ್ಲಾ ತಂಡದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ,

ಮನುಷ್ಯನ ಪ್ರಯತ್ನಕ್ಕೆ ದೇವರ ಅನುಗ್ರಹ ಇದ್ದಾಗ ಯಶಸ್ಸಾಗುತ್ತದೆ. ಧಾರ್ಮಿಕ, ಸಾಮಾಜಿಕ ಚಟುವಟಿ ಕೆಯು ಒಂದೇ ಉದ್ದೇಶ, ಒಂದೇ ದಾರಿ ಯಲ್ಲಿ ಸಾಗುವುದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದರು.

ರೋಟರಿ ಟಿ.ಆರ್.ಎಫ್. ಟ್ರಸ್ಟಿ ಡಾ। ಭರತ್ ಪಾಂಡ್ಯಾ ಪದಪ್ರದಾನ

ರೋಟರಿ ಟಿ.ಆರ್.ಎಫ್. ಟ್ರಸ್ಟಿ ಡಾ। ಭರತ್ ಪಾಂಡ್ಯಾ ಪದಪ್ರದಾನ ನೆರವೇರಿಸಿ ಮಾತನಾಡಿ ಜೀವನದಲ್ಲಿ ನಮಗೆ ಸಹಾಯದ ಗುಣ ಇರಬೇಕು. ರೋಟರಿಯ ಸದಸ್ಯರು ಪ್ರತೀದಿನ, ಪ್ರತೀಕ್ಷಣ ಒಂದಲ್ಲ ಒಂದುಸೇವೆಯಲ್ಲಿ ತೊಡಗು ವಂತಾಗಬೇಕು. ರೋಟರಿ ಸದಸ್ಯರು ಉತ್ತಮ ನಾಯಕತ್ವ ಕೊಡಬಲ್ಲರು. ತಮ್ಮ ಸುತ್ತಮುತ್ತಲಿನವರಲ್ಲಿ ಸೇವಾ ಮನೋಭಾವ ಬೆಳೆಸುವಷ್ಟು ಸಾಮರ್ಥ್ಯ ಹೊಂದಬೇಕು. ಯುವ ಕರನ್ನು ಹಾಗೂ ಮಹಿಳೆ ಯರನ್ನು ಸೇರಿಸಬೇಕು ಎಂದರು.

ನೂತನ ಗವರ್ನರ್ ಬಿ.ಎಂ. ಭಟ್ ಮಾತನಾಡಿ, ಈ ವರ್ಷ ಹತ್ತಾರು ಸಮಾಜಮುಖಿ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.ರೋಟರಿ ಫೌಂಡೇಶನ್ ಕೊಡುಗೆ, ಸದಸ್ಯತ್ವ ವೃದ್ಧಿ ಗುರಿ ಹೊಂದಲಾಗಿದೆ. ಸರ್ವರ ಸಹಕಾರದಿಂದ ಇದು ಸಾಧ್ಯ ಎಂದರು.

ನಿಕಟಪೂರ್ವ ಗವರ್ನರ್ ಕೆ. ಪಾಲಾಕ್ಷ ಜಿಲ್ಲಾ ಪ್ರಥಮ ಮಹಿಳೆ ವೀಣಾ ಎಂ. ಭಟ್, ರೋಟರಿ ಜಿಲ್ಲಾ ಪ್ರಮುಖರಾದ ಅಭಿನಂದನ್ ಎ. ಶೆಟ್ಟಿ ಸಿಎ ದೇವ್ ಆನಂದ್, ಡಿ. ಎಸ್. ರವಿ, ವಸಂತ್ ಹೋಬಳಿದಾರ್, ಅಲೆನ್ ವಿನಯ್ ಲೂವಿಸ್ ಹಾಗೂ ಟಿ. ಭಾಸ್ಕ‌ರೈ, ಅರುಣ್ ಕುಮಾರ್ ಶೆಟ್ಟಿ ಜಯಪ್ರಕಾಶ್ ಕೆದ್ಲಾಯ, ಅಶೋಕ್ ಕುಮಾರ್ ಶೆಟ್ಟಿ ಆಲ್ವಿನ್ ಎಸ್. ಕ್ವಾಡ್ರಸ್, ಸಿಎ ಕೆ. ಪದ್ಮನಾಭ

ಕಾಂಚನ್, ಆಲ್ವಿನ್ ಅಂದ್ರಾದೆ, ಸತೀಶ್ ಶೆಟ್ಟಿ ಪ್ರಮೋದ್ ಶೆಟ್ಟಿ ಜಿಲ್ಲಾ ಪದಾಧಿಕಾರಿಗಳು, ಸಹಾಯಕ ಗವರ್ನಸ್್ರ, ಜಿಲ್ಲಾ ಸಮ್ಮೇಳನ ಪದಾಧಿಕಾರಿಗಳು, ವಿವಿಧ ರೋಟರಿ ಕ್ಲಬ್ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.ಶಹಿಂಹಲ

ಈ ಸಂದರ್ಭ ಸಾಧಕರಿಗೆ ಸಮ್ಮಾನ, ಗೌರವಾರ್ಪಣೆ ನಡೆಯಿತು. ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ರೋಟರಿ ಸದಸ್ಯರು ಪಾಲ್ಗೊಂಡರು.

ಆರೂರು ತಿಮ್ಮಪ್ಪ ಶೆಟ್ಟಿ ಸ್ಥಿತಾ ನಿರೂಪಿಸಿ, ಜಿಲ್ಲಾ ಕಾರ್ಯದರ್ಶಿ ಪ್ರಾಣೇಶ್ ಎಸ್. ಕೆ. ವಂದಿಸಿದರು

Exit mobile version