Site icon ಉಡುಪಿ ನ್ಯೂಸ್ ಪ್ಲಸ್

ಕೆರೆಮನೆ ಶಿವಾನಂದ ಹೆಗಡೆ, ಗುಣವಂತೆ ಅವರಿಗೆ ಪ್ರಶಸ್ತಿ ಪ್ರಧಾನ

ಬೆಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿಯು ಶ್ರೀ ಜನಾರ್ದನ ಹಾಗೂ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ, ಉಡುಪಿ ಇವರ ಸಹಯೋಗದೊಂದಿಗೆ ಇಲ್ಲಿ ದಿನಾಂಕ:03/05/2026ರಂದು 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದು, ಸದರಿ ಸಾಲಿನ 2024ನೇ ಸಾಲಿನ ಪುಸ್ತಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆರೆಮನೆ ಶಿವಾನಂದ ಹೆಗಡೆ, ಗುಣವಂತೆ ಇವರು ಮೇಲ್ಕಂಡ ದಿನಾಂಕದಂದು ವೈಯುಕ್ತಿಕ ಕಾರಣಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಿರುವುದಿಲ್ಲ. ಆದುದರಿಂದ ದಿನಾಂಕ:10/06/2026ರಂದು ಅಕಾಡೆಮಿಯಲ್ಲಿ ಸ್ಥಾಯಿ ಸಮಿತಿ ಸಭೆಯನ್ನು ಆಯೋಜಿಸಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ, ರಿಜಿಸ್ಟ್ರಾರ್‌ ಶ್ರೀಮತಿ ನಮ್ರತ.ಎನ್ ಹಾಗೂ ಸದಸ್ಯರುಗಳಾದ ಶ್ರೀ ರಾಘವ.ಹೆಚ್‌, ಶ್ರೀ ಕೊಪ್ಪಲ ಮೋಹನ ಕದ್ರಿ, ಶ್ರೀ ಪೃಥ್ವಿ ರಾಜೇಶ್‌ ಕುಮಾರ್‌, ಶ್ರೀ ಪುಟ್ಟಸ್ವಾಮಿ ಎ.ಆರ್,‌ ಶ್ರೀ ವಿದ್ಯಾಧರ ವೆಂಕಟೇಶ್‌ ಜಲವಳ್ಳಿ, ಇವರುಗಳ ಉಪಸ್ಥಿತಿಯಲ್ಲಿ ಪುಸ್ತಕ ಬಹುಮಾನಿತರನ್ನು ಗೌರವಾನ್ವಿತವಾಗಿ ಶಾಲು, ಹಾರ, ನೆನಪಿನ ಕಾಣಿಕೆ, ಡ್ರೈಪ್ರೂಟ್ಸ್‌, ಪೇಟವನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಅಕಾಡೆಮಿಯ ಸದಸ್ಯರಾದ ಶ್ರೀ ರಾಘವ.ಹೆಚ್‌ ರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

Exit mobile version