ಉಡುಪಿ, ಮೇ 28: ನಗರದ ಕೆ.ಎಂ. ಮಾರ್ಗದಲ್ಲಿನ ಅಂದ್ರಾದೆ ಆರ್ಕೇಡ್ ನಲ್ಲಿ ‘ಮೆಡಿಕ್ವೆಸ್ಟ್ ಹೆಲ್ತ್‌ಕೇರ್’ ಕ್ಲಿನಿಕಲ್ ಲ್ಯಾಬೋರೇಟರಿಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು ಪ್ರಕೃತಿಗೆ ತೆರೆದುಕೊಂಡಂತಹ ಸಮಾಜದೆ ಜನರು ವಿವಿಧ ವ್ಯಾಧಿಗಳ ಚಿಕಿತ್ಸೆಗಾಗಿ ಹೈದರಾಬಾದ್ ಮುಂಬಯಿ, , ಚೆನ್ನೈ ಮೊದಲಾದೆಡೆಗೆ ಹೋಗಬೇಕಿದ್ದ ಕಾಲವಿತ್ತು ವ್ಯವಸ್ಥೆ ಉಡುಪಿಗೆ ಬಂದಿದೆ. ಉಡುಪಿಯು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಬ್ಯಾಂಕಿಂಗ್ ಸಹಿತ ಕಲೆ ವಿಶೇಷ ವಾಗಿ ಯಕ್ಷಗಾನದಲ್ಲಿ ಉತ್ತುಂಗದಲ್ಲಿದೆ.ಸಾಮಾಜಿಕ, ಆಧ್ಯಾತ್ಮಿಕ, ಆರೋಗ್ಯ ಸೇವೆ ಮೂಲಕ ದೊಡ್ಡ ಮೈಲುಗಲ್ಲು ಸಾಧಿಸುತ್ತಿದೆ ಎಂದು ಹಾರೈಸಿದರು.

ಉಡುಪಿ ಶಾಸಕ ಯಶ್ ಪಾಲ್ ಎ ಸುವರ್ಣ ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿ ಜೋತಿಷ ವಿದ್ವಾನ್ ಕಬಿಯಾಡಿ ಜಯರಾಮ್ ಆಚಾರ್ಯ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಶುಭ ಹಾರೈಸಿದರು.
ವಿಶೇಷತೆ
ಮೆಡಿಕ್ವೆಸ್ಟ್ ಹೆಲ್ತ್‌ಕೇರ್ ನವೆಂಬರ್ 20, 2020 ರಂದು ಪ್ರಾರಂಭವಾಗಿದ್ದು 9 ಸಣ್ಣ ಪ್ರಯೋಗಾಲಯ ಮತ್ತು 16 ಸಂಗ್ರಹಣಾ ಕೇಂದ್ರಗಳನ್ನು ಹೊಂದಿದ್ದು, ಒಟ್ಟು 25 ಶಾಖೆಗಳನ್ನು ಹೊಂದಿದೆ. ಮೆಡಿಕ್ವೆಸ್ಟ್ ಹೆಲ್ತ್‌ಕೇರ್ ಮಂಗಳೂರಿನ NABL ಪ್ರಮಾಣೀಕೃತ ಪ್ರಯೋಗಾಲಯವಾಗಿದೆ ಮತ್ತು ಪ್ಯಾನ್-ಇಂಡಿಯಾ ಕೂಡ ವಿಸ್ತರಣಾ ಯೋಜನೆಯನ್ನು ಹೊಂದಿದೆ.ಪ್ರಯೋಗಾಲಯವು ರೋಚೆ, ಮೆರಿಲ್ ಮತ್ತು ಮೈಂಡ್ರೇಯಿಂದ ವಿಶ್ವ ದರ್ಜೆಯ ಪ್ರಯೋಗಾಲಯ ವಿಶ್ಲೇಷಕಗಳನ್ನುಹೊಂದಿದೆ..ಸಾಫ್ಟ್‌ವೇರ್ ಸ್ವಯಂ-ರಚಿತ ವರದಿಯ ಸೌಲಭ್ಯಗಳನ್ನು ಒದಗಿಸುತ್ತದೆ, ಇದರಿಂದಾಗಿ ಕಡಿಮೆ ಮಾನವ ಹಸ್ತಕ್ಷೇಪಗಳು ಮತ್ತು ದೋಷದ ಸಾಧ್ಯತೆಗಳು ಕಡಿಮೆ, ಜೊತೆಗೆ MD ರೋಗಶಾಸ್ತ್ರ, ಜೀವರಾಸಾಯನಿಕ ಮತ್ತು ಸೂಕ್ಷ್ಮ ಜೀವವಿಜ್ಞಾನಿಗಳಲ್ಲಿ ಪರಿಣತಿ ಹೊಂದಿರುವ ವೈದ್ಯರು ಎಲ್ಲಾ ವರದಿಗಳ ವ್ಯಾಖ್ಯಾನವನ್ನು ಮಾಡುತ್ತಾರೆ..
ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ಸ್ಥಾಪಕಾಧ್ಯಕ್ಷ ಡಾ. ಕೃಷ್ಣಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಗಂಗೊಳ್ಳಿ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಅಂದ್ರಾದೆ, ಅಂದ್ರಾದೆ ಸಂಕೀರ್ಣದ ಮಾಲಕ ಡೊಮಿನಿಕ್ ಮಸ್ಕರನೆಸ್, ನಿವೃತ್ತ ಡಿಎಫ್‌ಒ ರಘುರಾಮ್ ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರೀನಾ ಟಿ. ಬಿ. ಸ್ವಾಗತಿಸಿ, ಮಧ್ವವಲ್ಲಭ ಆಚಾರ್ಯ ವಂದಿಸಿ, ఎంఐటి ಪ್ರಾಧ್ಯಾಪಕ ಡಾ.। ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.