ಉಡುಪಿ ನ್ಯೂಸ್ ಪ್ಲಸ್

ಕೆ ಪಿ ಸಿ ಸಿ ಸದ್ಯಸರಾಗಿ ನೀರ ಕೃಷ್ಣ ಶೆಟ್ಟಿ ನೇಮಕ

            ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರನ್ನಾಗಿ ಹೆಬ್ರಿಯ ನೀರ ಕೃಷ್ಣ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರ ಪ್ರಸ್ತಾವನೆ ಯಂತೆ ಹೆಬ್ರಿ ಬ್ಲಾಕ್ ನಲ್ಲಿ ಸರ್ವನುಮತದ ಅಂಗೀಕಾರದಿಂದ ಉಡುಪಿ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರಿಗೆ ಪ್ರಸ್ತಾಪ ಸಲ್ಲಿಸಿದ್ದು ಮೊಯ್ಲಿ ಶಿಫಾರಸ್ಸಿನಂತೆ ನೇಮಕ ಮಾಡಲಾಗಿದೆ ಕಾಂಗ್ರೆಸ್ ಪಕ್ಷದ ಸಾಧ್ಯಸ್ಯರಾಗಿ ಪಕ್ಷ ಸೇರಿದ ನೀರೆ ಕೃಷ್ಣ ಶೆಟ್ಟಿ ಅವರು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಕಾಗ್ರೇಸ್ ಉಪಾಧ್ಯಕ್ಷರಾಗಿ ಹಲವು ವಿಧಾನ ಸಭಾ ಕ್ಷೆತ್ರಗಳ ಬ್ಲಾಕ್ ಉಸ್ತುವಾರಿಯಾಗಿ ಪಂಚಾಯತ್ ರಾಜ್ ಇಲಾಖೆಯ ಅಪಾರ ಅನುಭವ ಹೊಂದಿರುವ ನೀರೆ ಕೃಷ್ಣ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ ರಾಜಕೀಯ ಧಾರ್ಮಿಕ ಸಹಕಾರ ಮತ್ತು ಸಾಮಾಜಿಕ ಕ್ಷೆತ್ರದಲ್ಲಿಯೂ ಸಕ್ರಿಯರಾಗಿದ್ದು ಅವರ ಹೆಬ್ರಿ ತಾಲೂಕು ರಚನಾ ಹೋರಾಟದಲ್ಲಿ ಸಂಚಾಲಕರಗಿದ್ದರು ನಿವೇಶನ ಪ್ರಕರಣದಲ್ಲಿ ಹೋರಾಟಮಾಡಿ ನಿವೇಶನ ರಹಿತರ ಪಾಲಿಗೆ ನ್ಯಾಯ ದೊರಕಿಸಲು ಹೋರಾಟ ಮಾಡಿದ್ದರು ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಉಪಾಧ್ಯಕ್ಷರಾಗಿ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪದಕಾರ ಒಕ್ಕೂಟದ ನಿರ್ದೇಶಕರಾಗಿ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗಿ ತಾನು ಸೇವೆ ಮಾಡಿದ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷ ಮತ್ತು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ ಉಡುಪಿಯ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ

Exit mobile version