Site icon ಉಡುಪಿ ನ್ಯೂಸ್ ಪ್ಲಸ್

*ದೀಪ ವೇದಿಕೆಯಲ್ಲಿ ಮಾತ್ರ ಬೆಳಗದೆ ಕಾರ್ಮಿಕನ ಮನೆಯಲ್ಲೂ ಬೆಳಗಬೇಕು

ಕಾರ್ಮಿಕ ದಿನಾಚರಣೆಯ ದೀಪ ವೇದಿಕೆಯಲ್ಲಿ ಮಾತ್ರ ಪ್ರಜ್ವಲಿಸದೆ ಪ್ರತಿಯೊಬ್ಬ ಕಾರ್ಮಿಕರ ಸಮಸ್ಯೆಗಳ ಪರಿಹಾರದ ದೀಪವಾಗಬೇಕು ಆರೋಗ್ಯದ ಸಮಧಾನದ ದೀಪವಾಗಬೇಕು ಈ ನಿಟ್ಟಿನಲ್ಲಿ ಮುತುವರ್ಜಿಯಿಂದ ಸದಾ ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿಯವರು ತುಳುನಾಡ ರಕ್ಷಣಾವೇದಿಕೆಯ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದ
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದೀಪ ಬೆಳಗಿಸಿ ಚಿಂತನ ನುಡಿದರು.
ಕಷ್ಟದಲ್ಲಿರುವ ಸಾವಿರಾರು ಕೈಗಳಿಗೆ ಆಸರೆ ಆಧಾರವಾಗಿ ನಿಂತು ಅವರ ವಿಶ್ವಾಸ ಸಂಪಾದಿಸಿ 18 ವರ್ಷಗಳಿಂದ ಸೇವೆ ಮಾಡುತ್ತಿರುವ ಸಂಘಟನೆ ಇನ್ನು ಮುಂದಕ್ಕೂ
ಅದೇ ನಿಷ್ಠೆ ಮತ್ತು ಅದೇ ಧ್ಯೇಯದಿಂದ ಸೇವೆ ಮಾಡಬೇಕು ಎಂದು ಕಾರ್ಮಿಕ ದಿನಾಚರಣೆಯ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ನುಡಿದರು
ಬಿಸಿಯಾದ ಚಹಾ, ಇಡ್ಲಿ ,ಅನ್ನ ಸಾಂಬಾರ್, ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಿ ಕೆಲವು ಗಂಟೆಗಳಲ್ಲಿ ವಿಷದೊಂದಿಗೆ ತಮ್ಮ ಬಳಿಗೆ ಬರುವ ಆಹಾರವನ್ನು ಅಮೃತವೆಂದು ತಿಳಿದು ತನ್ನ ಆರೋಗ್ಯವನ್ನು ಲೆಕ್ಕಿಸದ ಕಾರ್ಮಿಕನ ಬದುಕೇ ವಿಚಿತ್ರ ರಾತ್ರಿ ಹಗಲು ಬಿಸಿಲು ಮಳೆ ಎನ್ನದೆ ಯಾವುದೇ ಗ್ಲೌಸ್ , ಬೂಟು ಮಾಸ್ಕ, ಇಲ್ಲದೆ ತಾನು ಹೋಗುವ ವಾಹನವನ್ನು ಲೆಕ್ಕಿಸದೆ ತಾನು ಕೆಲಸ ಮಾಡುವ ಜಾಗದಲ್ಲಿ ಬಾತ್ರೂಮ್ ಟಾಯ್ಲೆಟ್ಟು ಕುಡಿಯುವ ನೀರು ಯಾವುದನ್ನು ಲೆಕ್ಕಿಸದೆ ಸರಿಯಾದ ಸಮಯ ,ಸರಿಯಾದ ಸಂಬಳ ಯಾವುದು ಗೊತ್ತಿಲ್ಲದೆ ,
ಬೀಡಿ, ಸಿಗ್ರೇಟು ,ತಂಬಾಕು ಗುಟ್ಕಾ, ಸರಾಯಿ , ಓಸಿ ಮುಂತಾದ ಅನೇಕ ತೊಂದರೆಗಳಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕನ ಜೀವನದಲ್ಲಿ ಬದಲಾವಣೆ ಆಗಲೇಬೇಕು ಅವನಿಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡುವಲ್ಲಿ ನಾವೆಲ್ಲರೂ ಸದಾ ಸೇವೆ ಮಾಡಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ ಲಕ್ಷ್ಮಿ ನಗರ ಕಳವಳ ವ್ಯಕ್ತಪಡಿಸಿದರು. ವೇದಿಕೆಯ ಅತಿಥಿಗಳು : ಫ್ರಾಂಕಿ ಡಿಸೋಜಾ ಉಡುಪಿ ಜಿಲ್ಲಾಧ್ಯಕ್ಷರು ತು ರ ವೇ ವಿಜಯೇಂದ್ರ ಕೆ ಲೇಬರ್ ಇನ್ಸ್ಪೆಕ್ಟರ್ ಪ್ರಶಾಂತ್

Exit mobile version