Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ:ಮೇ 01 ವಿಶ್ವ ಕಾರ್ಮಿಕರ ದಿನಾಚರಣೆ ಬ್ರಹತ್ ಮೆರವಣಿಗೆ

ನಾಲ್ಕು ಲೇಬರ್ ಕೋಡ್ ವಿರೋಧಿಸಿ, ಸಾಮ್ರಾಜ್ಯಶಾಹಿ ಯು ಎಸ್ ಯುದ್ಧ ನೀತಿ, ಬೆಲೆಯೇರಿಕೆ ವಿರುದ್ದ 2026 ಮೇ ದಿನಾಚರಣೆ ಮೇ 01 ರಂದು ಉಡುಪಿಯಲ್ಲಿ ಸಾವಿರಾರು ಕಾರ್ಮಿಕರ ಬ್ರಹತ್ ಮೆರವಣಿಗೆಯೊಂದಿಗೆ ಆರಂಭಗೊಳ್ಳಲಿದೆ.
ಅಂದು ಬೆಳಿಗ್ಗೆ ಉಡುಪಿ ಹಳೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯಿಂದ ಶ ಬೆಳಿಗ್ಗೆ 9.15ಕ್ಕೆ ಜಿಲ್ಲೆಯ ಕೆಲವು ಗ್ರಾಮಗಳಿಂದ ಆಗಮಿಸುವ ಕಟ್ಟಡ ,ಬೀಡಿ,ಕ್ಯಾಶು, ಅಂಗನವಾಡಿ,ಮೀನುಗಾರರು ಸೆಕ್ಯುರಿಟಿ ಕಾರ್ಮಿಕರು ,ಆಟೋ ರಿಕ್ಷಾ ಜನರಲ್ ವರ್ಕರ್ಸ್ ಅಕ್ಷರ ದಾಸೋಹ ನೌಕರರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಹಾಗೂ ಸಭೆ 11 ಕ್ಕೆ ನಡೆದು 12.30 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಸಭೆಯನ್ನುದ್ದೇಶಿಸಿ ಸಿಐಟಿಯು ರಾಜ್ಯ ಹಿರಿಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ

ಮಾತನಾಡಲಿದ್ದಾರೆ. ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಲಿದ್ದಾರೆ. ಕಾರ್ಕಳದಲ್ಲಿ ಮೇ ದಿನಾಚರಣೆ: ಕಾರ್ಕಳದ ಬಂಡಿಮಠ ಬಸ್ ನಿಲ್ದಾಣ ಬಳಿ ಬೆಳಿಗ್ಗೆ 10ಕ್ಕೆ ಮೇ ದಿನಾಚರಣೆ ನಡೆಯಲಿದೆ.ಅಕ್ಷರ ದಾಸೋಹ, ಕಟ್ಟಡ,ಲೇಮಿನ,ಬೀಡಿ ಕಾರ್ಮಿಕರು ಭಾಗವಹಿಸಲಿದ್ದಾರೆ. ಬ್ರಹ್ಮಾವರ, ಮಧ್ಯಾಹ್ನ 3ಗಂಟೆಗೆ ಹಾಗೂ ಸಾಲಿಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಗೆ ಮೇ ದಿನಾಚರಣೆ ನಡೆಯಲಿದೆ.
ಅಂಗನವಾಡಿ, ಆಟೋರಿಕ್ಷಾ,ಅಕ್ಷರ ದಾಸೋಹ, ಬೀಡಿ ಕಟ್ಟಡ ಕಾರ್ಮಿಕರು ಭಾಗವಹಿಸಲಿದ್ದಾರೆ.
ಪ್ರಕಟಣೆ ತಿಳಿಸಿದೆ.

Exit mobile version