ಉಡುಪಿ ನ್ಯೂಸ್ ಪ್ಲಸ್

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ರಿಯಾಝ್ ಪಳ್ಳಿ ಸರ್ವಾನುಮತದಿಂದ ಆಯ್ಕೆ

2017ರ ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ 2022-2023ರ ಸಾಲಿನ ಗೌರವಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಉದ್ಯಾವರ ನಾಗೇಶ್ ಕುಮಾರ್ ಮತ್ತು ಅಧ್ಯಕ್ಷರಾಗಿ ಗ್ರಾಮ ಪಂಚಾಯತ್‌ ಸದಸ್ಯ ರಿಯಾಝ್ ಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ತಿಲಕ್‌ರಾಜ್ ಸಾಲಿಯನ್  ಪುನರಾಯ್ಕೆಗೊಂಡರು ಉಪಾಧ್ಯಕ್ಷರಾಗಿ ಸೋಮಶೇಖರ ಸುರತ್ಕಲ್, ಶ್ರೀಮತಿ ಮೇರಿ ಡಿ’ಸೋಜಾ ಕಾರ್ಯದರ್ಶಿಯಾಗಿ ಶ್ರೀಮತಿ ಸುಗಂಧಿ ಶೇಖರ್, ಹಮೀದ್ ಸಾಬಾನ, ಕೋಶಾಧಿಕಾರಿಗಳಾಗಿ ಗಿರೀಶ್ ಗುಡ್ಡೆಯಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಧರ ಗಣೇಶ್ ನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಯು. ಆರ್.ಚಂದ್ರಶೇಖರ್, ಮಹಮದ್ ಆಲಿ, ಅಂತರಿಕ ಲೆಕ್ಕಪರಿಶೋಧಕರಾಗಿ ಹಬೀಬ್ ಪಳ್ಳಿ, ನಿರ್ದೇಶಕರಾಗಿ ಅಬ್ದುಲ್ ಜಲೀಲ್ ಸಾಹೇಬ್, ಮಹಮ್ಮದ್ ನಯಾಝ್ ಚಾರ್ಜ್ ಮಿನೇಜಸ್ ಶ್ರೀಮತಿ ಚಂದ್ರಾವತಿ.ಎಸ್‌  ಭಂಡಾರಿ ಯು ಪದ್ಮನಾಭ ಕಾಮತ್‌ ಶರತ್ ಕುಮಾರ ರಮೇಶ್ ಕುಮಾರ್ ಉದ್ಯಾವರ ಆಯ್ಕೆಯಾಗಿದ್ದಾರೆ

Exit mobile version