ಕಾಪು ವಿಧಾನಸಭಾ ಕ್ಷೇತ್ರದ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಯ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 55 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯ ಹಾಗೂ ಉದ್ಘಾಟನೆಯನ್ನು ಇಂದು ದಿನಾಂಕ 28-03-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡಿನ ಬ್ರಹ್ಮಬೈದರ್ಕಳ ಗರೋಡಿ ಹತ್ತಿರದ ನಾರಾಯಣ ಪೂಜಾರಿ ಮನೆಯಿಂದ ವಾರಿಜಾ ಶೆಟ್ಟಿ ಮನೆ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ, 1ನೇ ವಾರ್ಡಿನ ಗೋಪಾಲ ಸಾಲ್ಯಾನ್ ಮನೆಯಿಂದ ವೆಂಕಟೇಶ್ ನಾವಡರ ಗದ್ದೆ ತನಕ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ, 6ನೇ ವಾರ್ಡಿನ ಶೈಲಾ ರವರ ಮನೆಯಿಂದ ಮುಖ್ಯ ರಸ್ತೆ ತನಕ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ, 3ನೇ ವಾರ್ಡಿನ ಗರಡಿ ಮನೆ ನಾರಾಯಣ ಶೆಟ್ಟಿ ಮನೆಯಿಂದ ಕುಟ್ಟಿ ಪೂಜಾರಿ ಮನೆ ತನಕ ಕಾಂಕ್ರೀಟೀಕರಣ – 10 ಲಕ್ಷ, 8ನೇ ವಾರ್ಡಿನ ಉಚ್ಚಿಲ ಮೊಗವೀರ ಮಹಾಸಭೆಯ ಸಭಾಂಗಣ ಹಿಂಭಾಗ ಅಂಗನವಾಡಿ ಕಟ್ಟಡ ನಿರ್ಮಾಣ – 5 ಲಕ್ಷ, ಎರ್ಮಾಳ್ ಕೊಳದ ಬದಿಯಿಂದ ನೆಬಿಸ ಅಕ್ಕ ನವರ ಮನೆ ವರೆಗೆ ರಸ್ತೆ ಕಾಂಕ್ರೀಟೀಕರಣ – 5 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ 5 ಲಕ್ಷ ರೂಪಾಯಿ ಅನುದಾನದಲ್ಲಿ ಕುದ್ರೊಟ್ಟು ಬ್ರಹ್ಮ ಬೈದರ್ಕಳ ದೈವಸ್ಥಾನದಿಂದ ರಾಜೀವ ಶೆಟ್ಟಿ ಮನೆ ತನಕ ಅಭಿವೃದ್ಧಿಗೊಂಡ ರಸ್ತೆಯ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಬಡಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಮಾಜಿ ಉಪಾಧ್ಯಕ್ಷರಾದ ದೀಪಕ್, ಮಾಜಿ ಸದಸ್ಯರಾದ ಚಂದ್ರಶೇಖರ್, ಇಂದಿರಾ ಶೆಟ್ಟಿ, ಹರಿಪ್ರಸಾದ್, ಶಕುಂತಳಾ, ಮೋಹಿನಿ, ಕಲಾವತಿ, ಸ್ಥಳೀಯರಾದ ವಸಂತ ದೇವಾಡಿಗ, ಕಮಲಾಕ್ಷ ಶಣೈ ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

