Site icon ಉಡುಪಿ ನ್ಯೂಸ್ ಪ್ಲಸ್

ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಗೀತಾ ಕೆ ಬಿ ಸೆಟ್ಟಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ

ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಗೀತಾ ಕೆ ಬಿ ಸೆಟ್ಟಿ ಇವರು ಮಾರ್ಚ್ 21ರ ಶನಿವಾರ ಕುಟುಂಬಸ್ಥರೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಗೌರವಿಸಲಾಗಿ, ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಲಾಯಿತು.

ದೇವಿಯ ಶ್ಲೋಕಗಳನ್ನು ಪಠಣೆ ಮಾಡಿ, ಬಹಳಷ್ಟು ಹೊತ್ತು ದೇವಿಯ ಮುಂದೆಯೇ ನಿಂತು ಅಮ್ಮನನ್ನು ಪ್ರಾರ್ಥಿಸಿಕೊಂಡರು, ದೇವಳದ ಕಾಷ್ಟ ಶಿಲ್ಪ, ಶಿಲಾ ಕೆತ್ತನೆಗಳು ಮತ್ತು ಬೃಹತ್ ಘಂಟೆಯ ಬಗ್ಗೆ ತಿಳಿದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಉಪಸ್ಥಿತರಿದ್ದರು.

Exit mobile version