ಉಡುಪಿ : ಕ್ರಿಕೆಟಿಗ, ಸಂಘಟಕ ಉದ್ಯಾವರ ಪಾಂದೆ ನಿವಾಸಿ ಮುಹಮ್ಮದ್ ಸಮೀರ್ ಶರೀಫ್ (43) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ತಡರಾತ್ರಿ ನಿಧನರಾಗಿದ್ದಾರ ಯುಎಇಯಲ್ಲಿದ್ದ ಅವರು ಅಸೌಖ್ಯದ ಹಿನ್ನೆಲೆಯಲ್ಲಿ ಕೆಲವು ಸಮಯಗಳ ಹಿಂದೆ ಊರಿಗೆ ಮರಳಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವಾರು ವರ್ಷಗಳಿಂದ ಯುಎಇಯ ಶಾರ್ಜಾದಲ್ಲಿ ನೆಲೆಸಿದ್ದ ಸಮೀರ್ ಶರೀಫ್ ಯುಎಇ ಸಾಹೇಬಾನ್, ದುಬೈ ಕರ್ನಾಟಕ ಸಂಘ, ಕನ್ನಡಿಗಾಸ್ ಹೆಲ್ಪ್ ಲೈನ್, ಕನ್ನಡಿಗ ಫೆಡರೇಷನ್ ಸೇರಿದಂತೆ ಹಲವಾರು ಕನ್ನಡಪರ ಹಾಗು ಇನ್ನಿತರ ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು ಸಮೀರ್ ಶರೀಫ್ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯ ಸಕ್ರೀಯ ಸದಸ್ಯರಾಗಿ, ಉದ್ಯಾವರ ಮುಹಿಯದ್ದೀನ್ ಜುಮಾ ಮಸೀದಿಯ ಜಮಾಅತ್ ಸದಸ್ಯರಾಗಿ ಉದ್ಯಾವರ ಮುಹಿಯದ್ದೀನ್ ಜುಮಾ ಮಸೀದಿಯ ಜಮಾಅತ್ ಸದಸ್ಯರಾಗಿ, ಉದ್ಯಾವರ ಮುಸ್ಲಿಂ ಯಂಗ್ ಮೆನ್ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ ನಿಸ್ಸಂದೇಹವಾಗಿ, ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೆ. ಪಿ.ಸಿ ಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಅಲ್ಪಸಂಖ್ಯಾತರ ಘಟಕ ಡಾ ಶೇಖ್ ವಹೀದ್ ಸಂತಾಪ ಸೂಚಿಸಿದ್ದಾರೆ
ಉಡುಪಿ: ಕ್ರಿಕೆಟಿಗ, ಸಂಘಟಕ ಸಮೀರ್ ಶರೀಫ್ ನಿಧನ : ಡಾ ಶೇಖ್ ವಹೀದ್ ಸಂತಾಪ

