Site icon ಉಡುಪಿ ನ್ಯೂಸ್ ಪ್ಲಸ್

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಉದ್ಯಮಿ ಕುಶಲ್ ಎಸ್. ಹೆಗ್ಡೆ ಕುಟುಂಬದಿಂದ ಭೇಟಿ

ಕೆ ಎಸ್ ಎಚ್ ಸಂಸ್ಥೆ ಚೇರ್ ಮ್ಯಾನ್ ಮತ್ತು ಮುಖ್ಯ ನಿರ್ದೇಶಕ ಕುಶಲ್ ಎಸ್. ಹೆಗ್ಡೆ ಅವರು ಕುಟುಂಬ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.

ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ ಮತ್ತು ಮಾತ್ರ ವೈಭವ ಸೇವಾ ಸಮಿತಿಯಿಂದ ಪ್ರಾರ್ಥಿಸಿ ಮಾತೃ ವೈಭವದ ಪ್ರಸಾದವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು ಪ್ರಥಮ ಹಂತದ ಕಾಮಗಾರಿ ಅತ್ಯದ್ಭುತವಾಗಿ ಮೂಡಿ ಬಂದಿದೆ, ಇನ್ನಷ್ಟು ಹೆಚ್ಚಿನ ಕೆಲಸ ಕಾರ್ಯಗಳು ಎಲ್ಲರ ಸಹಕಾರದಿಂದ ನಡೆಯಲಿ ಎಂದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಮತ್ತು ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version