ಉಡುಪಿ ನ್ಯೂಸ್ ಪ್ಲಸ್

ಬಂಟಕಲ್‌ ತಾಂತ್ರಿಕ ಕಾಲೇಜು: ರಾಷ್ಟ್ರ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವರ್ಣೋತ್ಸವ ಸಮಾರೋಪ

ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟç ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ
“ವರ್ಣೋತ್ಸವ ೨೦೨೬” ಇದರ ಸಮಾರೋಪ ಸಮಾರಂಭವು ೧೨ ಮಾರ್ಚ್ ೨೦೨೬ರಂದು ಕಾಲೇಜಿನ ಆವರಣದಲ್ಲಿ
ವಿಜೃಂಬಣೆಯಿAದ ಜರುಗಿತು. ವಿವಿಧ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳ ಸುಮಾರು ೫೫೦ಕ್ಕೂ ಹೆಚ್ಚು
ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಮ್ಮ ಆಶೀರ್ವಚನದಲ್ಲಿ ಕಲಿಕೆಯ ನಿರಂತರವಾಗಿ ಹರಿಯುತ್ತಿರಬೇಕು. ಕೃತಕ
ಬುದ್ದಿಮತ್ತೆಯ ಈ ಯುಗದಲ್ಲಿ ಕಲಿಕೆ ಎಂದಿಗೂ ನಿಲ್ಲದ ಪ್ರಕ್ರಿಯೆಯಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಕಾರ್ಯದರ್ಶಿಗಳಾದ ಶ್ರೀ
ರತ್ನಕುಮಾರ್ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ದಿನ ನಿತ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು
ತಾಂತ್ರಿಕತೆಯನ್ನು ಬಳಸುವಂತೆ ಸಲಹೆ ನೀಡಿದರು. ವಿದೇಶಿ ಸಂಪನ್ಮೂಲಗಳ ಅವಲಂಬನೆ ಕಡಿಮೆ ಮಾಡಲು ಯುವ
ಇಂಜಿನಿಯರ್‌ಗಳು ತಮ್ಮ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತಂದು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು
ಎಂದು ಕರೆ ನೀಡಿದರು”.


ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಇವರು ಸ್ವಾಗತಿಸಿದರು. ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ
ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಶಿವಮೊಗ್ಗದ ಜವಹಾರ್
ಲಾಲ್ ನೆಹರು ನ್ಯೂ ತಾಂತ್ರಿಕ ಕಾಲೇಜು ಇವರು ವರ್ಣೋತ್ಸವ ೨೦೨೬ ಇದರ ಚಾಂಪಿಯನ್‌ಶಿಪ್ ಬಹುಮಾನ ಪಡೆದುಕೊಂಡರೆ
ಮೂಡಬಿದ್ರಿಯ ಮಂಗಳೂರು ತಾಂತ್ರಿಕ ಮಹಾವಿದ್ಯಾಲಯವು ದ್ವಿತೀಯ ಸ್ಥಾನದೊಂದಿಗೆ ರನ್ರ‍್ಸ್ ಅಪ್ ಬಹುಮಾನ
ಪಡೆದುಕೊಂಡಿತು. ಈ ವರ್ಷ ವಿಶೇಷವಾಗಿ ತಾಂತ್ರಿಕ ಸ್ಪರ್ಧೆ ಚಾಂಪಿಯನ್‌ಶಿಪ್ ಸೈಂಟ್ ಜೋಸೆಫ್ ಇಂಜಿನಿಯರಿAಗ್
ಕಾಲೇಜು ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಎನ್.ಎಮ್.ಎ.ಎಮ್.ಐ.ಟಿ, ನಿಟ್ಟೆ ಪಡೆದುಕೊಂಡಿತು.
ಬೆAಗಳೂರಿನ ಪ್ರತಿಷ್ಠಿತ ಕಂಪೆನಿ ಲೀಪ್ ಪ್ರಾಗ್ ಪ್ರೆöÊವೇಟ್ ಲಿಮಿಟೆಡ್, ಭೀಮಾ ಜ್ಯುವೆಲ್ರ‍್ಸ್ ಪ್ರೆöÊವೇಟ್ ಲಿಮಿಟೆಡ್, ಎಸರ್
ಪ್ರೆöÊವೇಟ್ ಲಿಮಿಟೆಡ್, ಸಿಸ್–ಕಾಂಪ್, ಶ್ರೀ ಪ್ರಕಾಶ್ ಶೆಟ್ಟಿಗಾರ್ ಬಂಟಕಲ್ ಹಾಗೂ ಇತರ ಹಿತೈಷಿಗಳು ಇವರು ವರ್ಣೋತ್ಸವ
೨೦೨೬ ಪ್ರಾಯೋಜಕತ್ವ ನೀಡಿ ಸಹಕರಿಸಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ ತಂತ್ರಿಗಳು, ಕಾರ್ಯದರ್ಶಿಗಳಾದ ಶ್ರೀ
ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರೊ.ಡಾ. ರಾಧಾಕೃಷ್ಣ ಎಸ್
ಐತಾಳ್, ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಹಾಗೂ ಕಾಲೇಜಿನ ತಾಂತ್ರಿಕ ಕಾರ್ಯಕ್ರಮಗಳ ಸಂಯೋಜಕರಾದ ಡಾ.
ರೆನಿಟಾ ಶರೋನ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ರೆನಿಟಾ ಶರೋನ್ ಮೋನಿಸ್ ವರ್ಣೋತ್ಸವ ೨೦೨೬ ಇದರ ವರದಿಯನ್ನು ವಾಚಿಸಿದರು. ಪ್ರಾಧ್ಯಾಪಕರಾದ ಶ್ರೀ ರಾಘವೇಂದ್ರ
ಜಿ ಎಸ್ ಇವರು ವಿವಿಧ ತಾಂತ್ರಿಕ-ಸಾAಸ್ಕೃತಿಕ ಮತ್ತು ಮ್ಯಾನೇಜ್‌ಮೆಂಟ್ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಚಿಸಿದರು.
ಸಂಜೆ ಕಾಲೇಜಿನ ಯಕ್ಷಗಾನ ಸಂಘ “ಯಕ್ಷಸಿಂಚನ”ದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು

Exit mobile version