ಪ್ರಧಾನ ಕಚೇರಿಯನ್ನು ಅಧಿಕೃತವಾಗಿ ಆರಂಭ ಮಾಡುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ದಾಪುಗಾಲನ್ನ ಮಡಿವಾಳ ಸಮಾಜದವರು ಹಾಕಿಕೊಂಡಿದ್ದಾರೆ ಆರ್ಥಿಕ, ಶೈಕ್ಷಣಿಕ ಅಂಕಿ-ಸಂಖ್ಯೆಗಳ ಆಧಾರದಲ್ಲಿ ಮಡಿವಾಳ ಸಮುದಾಯ ಸಣ್ಣ ಸಂಖ್ಯೆಯಲ್ಲಿದ್ದರೂ ಸಹಕಾರಿ ಕ್ಷೇತ್ರ ಸಮಾಜ ಕಟ್ಟುವ ಕೇಂದ್ರವಾಗಿ ರೂಪುಗೊಳ್ಳುತ್ತದೆ ಕರಾವಳಿ ಜಂಕ್ಷನ್ ಬಳಿಯ ಆಕಾಶ್ ಗಂಗಾ ಕಾಂಪ್ಲೆಕ್ಸ್‌ನಲ್ಲಿ ರವಿವಾರ ಗುರುಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಸ್ವಂತ ಕಟ್ಟಡ ಪ್ರಧಾನ ಕಚೇರಿಯ ಸ್ಥಳಾಂತರ ಮತ್ತು ಉದ್ಘಾಟನ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಭದ್ರತಾ ಕೊಠಡಿಯನ್ನು ಶಾಸಕ ಯಶ್ ಪಾಲ್ ಎ.ಸುವರ್ಣ ಉದ್ಘಾಟಿಸಿದರು. ಅನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ತಾನಿಶ್ರೀ ಗುಜರನ್ ಅವರನ್ನು ಸಮ್ಮಾನಿಸಲಾಯಿತು.

ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಸಹಕಾರ ಸಂಸ್ಥೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಹೊಸ ಕಾನೂನು ರೂಪಿಸುವ ಅಗತ್ಯವೂ ಇದೆ. ತಂತ್ರಜ್ಞಾನ ಹಾಗೂ ಆಡಳಿತವರ್ಗ ಒಗ್ಗಟ್ಟಾಗಿದ್ದಾಗ ಸಂಸ್ಥೆ ಮತ್ತಷ್ಟು ಅಭಿವೃದ್ಧಿಯಾಗುವ ಜತೆಗೆ ಭ್ರಷ್ಟಾಚಾರವನ್ನೂ ತಡೆಗಟ್ಟಲು ಸಾಧ್ಯವಿದೆ ಎಂದರು.
ಜಯಕರ್ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ ಕನಿಷ್ಠ ಬಂಡವಾಳದಲ್ಲಿ ಸ್ಥಾಪನೆಯಾದ ಸಂಸ್ಥೆ 300 ಕೋಟಿಗಿಂತಲೂ ವಾರ್ಷಿಕ ವ್ಯವಹಾರ ಮಾಡಿದರೊಂದಿಗೆ 60 ಕೋಟಿಗಿಂತಲೂ ಮೇಲ್ಪಟ್ಟು ಠೇವಣಿ ಸಂಗ್ರಹಿಸಿ ಅದಕ್ಕೆ ಅನುಗುಣವಾಗಿ ಅಗತ್ಯತೆ ಉಳ್ಳವರಿಗೆ ಸಾಲವನ್ನು ನೀಡುವುದರ ಮೂಲಕ ಇವತ್ತು ಉಡುಪಿ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಮೂಡಿಬಂದಿದೆ ಎಂದು ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದರು
ನೂತನವಾಗಿ ಆರಂಭಗೊಂಡ ಕೇಂದ್ರ ಕಚೇರಿ ಮತ್ತು ಬ್ಯಾಂಕಿಂಗ್ ವಿಭಾಗ ಸುಮಾರು 2,500 ಚ.ಅಡಿ ವಿಸ್ತೀರ್ಣವಿದ್ದು ಸಂಪೂರ್ಣ ಹವಾನಿಯಂತ್ರಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಭದ್ರತಾ ಕೊಠಡಿ ಇರಲಿದ್ದು, ಹೆಚ್ಚಿನ ಭದ್ರತೆಗೆ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಒಪ್ಪಂದ ಮಾಡಿಕೊಂಡ ಸೈನ್‌ಇನ್ ಸೆಕ್ಯುರಿಟಿ ಸಂಸ್ಥೆಯ ಸಿಸಿ ಟಿವಿ ಅಳವಡಿಸಲಾಗಿದೆ. ಶಾಖೆಗಳ ವ್ಯವಹಾರಗಳನ್ನು ಕೇಂದ್ರ ಕಚೇರಿಯಲ್ಲಿಯೇ ? ನಿಯಂತ್ರಿಸಲು ಕೋರ್‌ಬ್ಯಾಂಕಿಂಗ್ ಸೆಲ್ಯೂಶನ್ ಸಾಫ್ಟ್ ವೇರ್ ಅಳವಡಿಸಲಾಗಿದೆ. ಪ್ರಧಾನ ಕಚೇರಿಯಲ್ಲಿ ಆಸ್ತಿ ಅಡಮಾನ, ಗೃಹ ನಿರ್ಮಾಣ, ವಾಹನ, ಚಿನ್ನಾಭರಣ ಅಡಮಾನ ಸಾಲಗಳನ್ನು ಅತ್ಯಂತ ಆಕರ್ಷಕ ಬಡ್ಡಿ ದರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಚ್. ಆನಂದ ಮಡಿವಾಳ ತಿಳಿಸಿದರು
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಗಣ್ಯರಾದ ಕೆ. ಉದಯ ಕುಮಾರ್ ಶೆಟ್ಟಿ ಎಚ್. ಶೇಖರ ಮಡಿವಾಳ, ರಘುರಾಮ ದೇವಾಡಿಗ, ಇಂದು ಶೇಖರ್ ಪಿ.ಬಿ., ಪ್ರದೀಪ್ ಮಡಿವಾಳ, ಕೆ.ಶಂಕರ ಉಪಸ್ಥಿತರಿದ್ದರು.