Site icon ಉಡುಪಿ ನ್ಯೂಸ್ ಪ್ಲಸ್

ಜ17: ಅಡ್ಡೆನಂದಿಕೂರು ಕೋಟಿಚೆನ್ನಯ ಜೋಡುಕರೆ ಕಂಬಳ

ಜ17. 33ನೇ ವರ್ಷದ ಅಡ್ಡೆನಂದಿಕೂರು ಕೋಟಿಚೆನ್ನಯ ಜೋಡುಕರೆ ಕಂಬಳ :ಅಡ್ಡೆ-ನಅದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳೋತ್ಸವವು ಜ. 17ರಂದು ಅಡ್ಡೆನಂದಿಕೂರಿನಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.ಕನೆ ಹಲಗೆ, ಅಡ್ಡಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಹಗ್ಗ ಹಿರಿಯ ವಿಭಾಗದ ವಿಜೇತ ಕೋಣಗಳನ್ನು ಓಡಿಸಿದ ಓಟಗಾರನಿಗೆ ದಿ। ನಡುಮುಗೇರಗುತ್ತು ಕರುಣಾಕರ ಶೆಟ್ಟಿ ಸ್ಮರಣಾರ್ಥ ಒಂದು ಪವನ್ ವಿಶೇಷ ಬಹುಮಾನ ನೀಡಲಾಗುವುದು. ಕಂಬಳೋತ್ಸವವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರ ಮಧ್ವರಾಯ ಭಟ್ ಅಂದು ಬೆಳಿಗ್ಗೆ 8ಗಂಟೆಗೆ ಉದ್ಘಾಟಿಸಲಿದ್ದು, ಎಲ್ಲೂರುಗುತ್ತು ವೈ.ಪ್ರಪುಲ್ಲ ಶೆಟ್ಟಿ ಅಡ್ಡೆ ಮಹಾಗಣಪತಿ ದೇವಸ್ಥಾನದ ಜನ್ನಿ ರವಿಶಂಕರ ಭಟ್, ಅಡ್ವಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷಸುಂದರ ಯು ಸುವರ್ಣ ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಜ.18ರಂದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ

Exit mobile version