ಉಡುಪಿ ನ್ಯೂಸ್ ಪ್ಲಸ್

ಬೆಂಗಳೂರು : ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಶೇಕ್ ಮಯ್ಯದಿ ಇಸ್ಮಾಯಿಲ್ ರವರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು: ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುವ ತೆರೆಮರೆಯ ಸಮಾಜ ಸೇವಕ ಉಚ್ಚಿಲದ ಶೇಖ್ ಮಯ್ಯದ್ದಿ ಇಸ್ಮಾಯಿಲ್ ಇವರಿಗೆ 2026ನೇ ಸಾಲಿನ ರಾಜ್ಯದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ “ಭಾರತ ಸೇವಾ ರತ್ನ” ನೀಡಿ ಗೌರವಿಸಲಾಯಿತು ಕರ್ನಾಟಕ ಪ್ರೆಸ್ ಕ್ಲಾಬ್ ವತಿಯಿಂದ ಜನವರಿ 13 ರಂದು “ಕಲಾಗ್ರಾಮ”ಏನ್.ಜಿ.ಇ.ಎಫ್ ಲೇಔಟ್, ಜ್ಞಾನಭಾರತಿ, ಬೆಂಗಳೂರು ಸಭಾಂಗಣದಲ್ಲಿ ನಡೆದ, 2026 ನೇ ಸಾಲಿನ ರಾಜ್ಯದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ “ಭಾರತ ಸೇವಾ ರತ್ನ” ಬಿರುದು ಹಾಗು ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರಾಜ್ಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಯ್ಯದ್ದಿಯವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ .ಎಸ್ ರಾಮಸ್ವಾಮಿ ರಾಜ್ಯಾಧ್ಯಕ್ಷರು ಕರ್ನಾಟಕ ಪ್ರೆಸ್ ಕ್ಲಬ್ ಶ್ರೀ ಸಿದ್ಧಲಿಂಗಸ್ವಾಮೀಜಿ ಅಧ್ಯಕ್ಷರು | ಪವಾಡ ಶ್ರೀ ಬಸವಣ್ಣದೇವರ ಮಠ ನೆಲಮಂಗಲ ಡಾ|| ಪೂಜ್ಯಶ್ರೀ ಕೈಲಾಸಪತಿ ಮಹಾಸ್ವಾಮಿಗಳು ಶ್ರದ್ದಾನಂದ ಆಶ್ರಮ ಅನವಾಲ, ತಾ|| ಬದಾಮಿ ಜಿ॥ ಬಾಗಲಕೋಟೆ ಶ್ರೀ ಪಿ ಕೃಷ್ಣಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ , ಅಧ್ಯಕ್ಷರಾದ ರಮೇಶ್ ಎಸ್ .ಜಿ ಹಾಗು ಅನೇಕ ಗಣ್ಯರು ಉಪಸ್ಥಿತರಿದ್ದರು

Exit mobile version