ಉಡುಪಿ ನ್ಯೂಸ್ ಪ್ಲಸ್

ಕಾಪು ಪುರಸಭೆಯ ಆಯೋಜನೆಯಲ್ಲಿ ವಿವಿಧ ಸಂಘಟನೆಗಳೊಂದಿಗೆ ಬೀಚ್ ಸ್ವಚ್ಛತಾ ಅಭಿಯಾನ.

ಕಾಪುಪುರ ಸಭಾ ವ್ಯಾಪ್ತಿಯಲ್ಲಿ ಭಾರತೀಯ ಸ್ವಚ್ಛತಾ ಲೀಗ್ ದೇಸೀಕ್ರೂ ಸಂಘಟನೆ, ಜಿಪ್ಸಿಶನ್ ಸಂಸ್ಥೆಯಿಂದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶನಿವಾರ ಬೆಳಗ್ಗೆ ಕಾಪು ಲೈಟ್ ಹೌಸ್ ಬೀಚಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಉದ್ಘಾಟಿಸಿದರು.ಈ ಸಂದರ್ಭ ಕಾಪು ಪುರಸಭಾ ಅಧಿಕಾರಿ ವೆಂಕಟೇಶ್ ನಾವಡ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರವಾದ ಕಾಪು ವಿನಲ್ಲಿ ವಿವಿಧ ಸಂಘಟನೆಗಳ ಆಯೋಜನೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಇದರಲ್ಲಿ ನಾವು ಸಹಭಾಗಿ ಆಗುತ್ತಿದ್ದೇವೆ ಎಂದರು.ಈ ಸಂದರ್ಭ ಕಾಪು ಪುರಸಭಾ ಸದಸ್ಯರು, ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು. 

video link

 

https://youtu.be/aplpDDCGkqI

 

 

Exit mobile version