Site icon ಉಡುಪಿ ನ್ಯೂಸ್ ಪ್ಲಸ್

ಎರ್ಮಾಳು ತೆಂಕ ಕಿನಾರ ಗ್ಲೋಬಲ್ ಶಾಲೆ ವಾರ್ಷಿಕೋತ್ಸವ ಶಿಕ್ಷಣವು ಕೇವಲ ಅಂಕಕ್ಕೆ ಸೀಮಿತವಾಗದೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರ ಬೇಕು – ಪ್ರತೀಕ್ ಬಾಯಲ್ I A S

ಎರ್ಮಾಳು ತೆಂಕ ಕಿನಾರ ಗ್ಲೋಬಲ್ ಶಾಲೆ ವಾರ್ಷಿಕೋತ್ಸವ ಜನವರಿ 3ರಂದು ವಿಜೃಂಭಣೆಯಿಂದ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀ ಪ್ರತೀಕ್ ಬಾಯಲ್ I A S,ಇವರು ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣವು ಕೇವಲ ಅಂಕಕ್ಕೆ ಸೀಮಿತವಾಗದೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರ ಬೇಕು ಎಂದರು. ಇನ್ನೊರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀ ಅಭಿದ್
ಗದ್ಯಾಳ್ K A S, ರವರು ಪೋಷಕರು ಮಕ್ಕಳಿಗೆ ಅಸ್ತಿಯನ್ನು ಮಾಡುವ ಬದಲು ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನೇ ಸಮಾಜಕ್ಕೆ ಅಸ್ತಿಗಳನ್ನಾಗಿ ಮಾಡಿ ಎಂಬ ಕರೆ ನೀಡಿದರು. ವಿಶೇಷ ಅಹ್ವಾನಿತರಾಗಿ ಕಾಪು ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀ ಜೇಮ್ಸ್ ಡಿ ಸಿಲ್ವ,ಡಾಕ್ಟರ್ ಶ್ರೀ ಸುನಿಲ್ ಕುಮಾರ್, ಅಲ್ ಫಲಹ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ನಜೀರ್
ಹುಸೇನ್, ಉದ್ಯಮಿ ಶ್ರೀ ಸಚಿನ್ ಶೆಟ್ಟಿ, ಶ್ರೇಯ ಗೋಲ್ಡ್ ಅಂಡ್ ಡೈಮಂಡ್ ಮಾಲಕರಾದ ಶ್ರೀ ವಿಶುಕುಮಾರ್, ಎರ್ಮಾಳ್ ತೆಂಕ ಎಜುಕೇಶನ್ ಸೊಸೈಟಿ (ರಿ ) ಮುಂಬೈ ಇದರ ಅಧ್ಯಕ್ಷರಾಗಿರುವ ಶ್ರೀ ಸುರೇಶ್ ಎಸ್ ಕುಂದರ್ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಸುವರ್ಣ, ಎರ್ಮಾಳ್ ತೆಂಕ ಎಜುಕೇಶನ್ ಸೊಸೈಟಿ (ರಿ ) ಎರ್ಮಾಳ್ ತೆಂಕ ಇದರ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್, ಮೊಗವೀರ ಸಭಾದ ಅಧ್ಯಕ್ಷರಾದ ಶ್ರೀ ಲಿಂಗಪ್ಪ ಪುತ್ರನ್, ಮೊಗವೀರ ಸಭಾ ಮುಂಬೈ ಇದರ ಉಪಾಧ್ಯಕ್ಷರಾದ ಶ್ರೀ ರವಿ ಪುತ್ರನ್, ಮಹಿಳಾ ಮಂಡಲ ಅಧ್ಯಕ್ಷರಾದ ಶ್ರೀಮತಿ ನಳಿನಿ ಬಂಗೇರ, ಶ್ರೀ ಪ್ರಭಾಕರ್ ಪುತ್ರನ್, ಶ್ರೀ ದಾಮೋದರ ಸುವರ್ಣ, ಶ್ರೀಮತಿ ಕಸ್ತೂರಿ ಸುವರ್ಣ, ಶಿಕ್ಷಕ ರಕ್ಷಕ ಸಂಘದ ಪ್ರತಿನಿಧಿ ಮೊಹಮ್ಮದ್ ಸಲೀಂ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರೀತಿ ಸುವರ್ಣ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿಯರಾದ ಅಪ್ರಾ ಮತ್ತು ಸುಮಿತ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ರಾಜೇಶ್ ಸ್ವಾಗತಿಸಿದರು. ಸುಶಾಂಕ ವಂದಿಸಿದರು.

Exit mobile version