ಉಡುಪಿ ನ್ಯೂಸ್ ಪ್ಲಸ್

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು-ಉಡುಪಿ ತಾಲೂಕು ಸಮಿತಿಯ ಆಶ್ರಯದಲ್ಲಿ 4ನೇ ವರ್ಷದ ದಿ| ಕೆ. ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನ ವಿತರಣೆ ಬಂಟ ಸಮ್ಮಿಲನ ಮತ್ತು ಸಮ್ಮಾನ

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು-ಉಡುಪಿ ತಾಲೂಕು ಸಮಿತಿಯ ಆಶ್ರಯದಲ್ಲಿ 4ನೇ ವರ್ಷದ ದಿ| ಕೆ. ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಬಂಟ ಸಮ್ಮಿಲನ ಕಾರ್ಯಕ್ರಮದಲ್ಲಿ ಜೀವಮಾನದ ಪ್ರಶಸ್ತಿ, ಸಾಧಕರಿಗೆ ಸಮ್ಮಾನ, ಆರ್ಥಿಕ ನೆರವು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ವಿತರಿಸಲಾಯಿತು. ಹೈದರಾಬಾದ್‌ನ ಸಿಯೇಟ್ ಲಿ.ನ ಹಿರಿಯ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಅಧ್ಯಕ್ಷತೆ ವಹಿಸಿದರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ವಿದ್ಯಾರ್ಥಿ ವೇತನ ವಿತರಿಸಿದರು ಸಂಸ್ಥೆ ಯ ಕಾರ್ಯ ವೈಖರಿ ಗಳಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟೋ ಎಂಟರೋಲಾಜಿ ವಿಭಾಗದ ಮುಖ್ಯಸ್ಥಡಾ। ಶಿರಣ್ ಶೆಟ್ಟಿ( ವೈದ್ಯಕೀಯ), ಅಂತಾರಾಷ್ಟ್ರೀಯ ಮಟ್ಟದ ಮಾಜಿ ಕ್ರೀಡಾಪಟು ಶಾಲಿನಿ ರಾಜೇಶ್ ಶೆಟ್ಟಿ (ಕ್ರೀಡೆ), ಡಾ| ಅಪೂರ್ವ ಜ್ಞಾನ ಬ್ರಹ್ಮಾವರ (ಶಿಕ್ಷಣ ಸಂಶೋಧನೆಯಲ್ಲಿ ಡಾಕ್ಟರೆಟ್ ಪದವೀಧರೆ), ಸತೀಶ್ ಶೆಟ್ಟಿ ಶ್ಯಾನರಬೆಟ್ಟು ಪೆರ್ಡೂರು (ಹೈನುಗಾರಿಕೆ), ಮಿಶಾ ಹೆಗ್ಡೆ (ಶಿಕ್ಷಣ ಸಂಶೋಧನೆ) ಅವರನ್ನುಸಮಾಜ ಬಾಂಧವರ ವಿವಾಹ, ಆರೋಗ್ಯ ಹಾಗೂ ಇನ್ನಿತರ ಕಷ್ಟಗಳಿಗೆ ಸ್ಪಂದಿಸಿ 5 ಲ.ರೂ. ಆರ್ಥಿಕ ನೆರವು ನೀಡಲಾಯಿತು. ಸತೀಶ್ಚಂದ್ರ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಹಾಗೂ ಮಾತೃ ಸಂಘ ಉಡುಪಿ ತಾಲೂಕು ಸಮಿತಿ ವತಿಯಿಂದ ಸುಮಾರು 20 ಲ.ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.

21 ಜನ ಎಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಗಿದೆ. ಈ ಸಂದರ್ಭಉಪಸ್ಥಿತರಿದ್ದರುದಲ್ಲಿ ಶಿವಪ್ರಸಾದ್ ಹೆಗ್ಡೆ ಹಿರೆಬೆಟ್ಟು ದಿನೇಶ್ ಹೆಗ್ಡೆ ಶಿರ್ವ ಕೊಡು ಭುಜಂಗ ಶೆಟ್ಟಿ ಬ್ರಹ್ಮವಾರ ನಿತೀಶ್ ಕುಮಾರ್ ಶೆಟ್ಟಿ ಹಿರಿಯಡ್ಕ ಸುಭಾಷ್ ಬಲ್ಲಾಳ್ ಇಂದಿರಾ ಸುಬ್ಬಯ್ಯ ಶೆಟ್ಟಿ ಉಡುಪಿ ಹರೀಶ್ ಶೆಟ್ಟಿ ಮಿಥುನ್ ಆರ್ ಹೆಗ್ಡೆ ಶ್ರೀಧರ ಕೆ ಶೆಟ್ಟಿ ಕಿಶೋರ್ ಶೆಟ್ಟಿ ನಿರುಪಮಾ ಪ್ರಸಾದ್ ಶೆಟ್ಟಿ ಪ್ರಸಾದ್

Exit mobile version