Site icon ಉಡುಪಿ ನ್ಯೂಸ್ ಪ್ಲಸ್

ಕುಲಾಲ ಸಂಘ (ರಿ) ಹೆಬ್ರಿ ತಾಲೂಕು ವಾರ್ಷಿಕ ಮಹಾಸಭೆಯ ಪ್ರಯುಕ್ತ ಬ್ರಹತ್ ಬೈಕ್ ರ‍್ಯಾಲಿ

ಕುಲಾಲ ಸಂಘ (ರಿ) ಹೆಬ್ರಿ ತಾಲೂಕು ವಾರ್ಷಿಕ ಮಹಾಸಭೆಯ ಪ್ರಯುಕ್ತ ನಡೆದ ಬ್ರಹತ್ ಬೈಕ್ ರ‍್ಯಾಲಿ ಬಂಟರ ಭವನದಿಂದ ಹೆಬ್ರಿ ಚೈತನ್ಯ ಸಭಾಭವನದ ವರೆಗೆ ಡಿ. 21 l ರಂದು ಬೆಳಿಗ್ಗೆ 10.30ಕ್ಕೆ ನಡೆಯಿತು.ಕಾರ್ಕಳ ವಲಯ ಆರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಬ್ರಹತ್ ಬೈಕ್ ರ್ಯಾಲಿಗೆ ಚಾಲನೆಯನ್ನು ನೀಡಿದರು.

ಹೆಬ್ರಿ ಚೈತನ್ಯ ಸಭಾಭವನದಲ್ಲಿ ಬೈಕ್ ರ್ಯಾಲಿಯನ್ನು ಮುಕ್ತಾಯಗೊಳಿಸಿ ವಾರ್ಷಿಕ ಮಹಾಸಭೆ ಮತ್ತು ವಿದ್ಯಾಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ನಡೆಯಿತು. ಭೋಜ ಕುಲಾಲ್ ಬೇಳಂಜೆ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಭೋಜ ಕುಲಾಲ್ ಬೇಳಂಜೆ ಮಾತನಾಡಿ ಸಂಘಕ್ಕೆ ನಿವೇಶನದ ಅಗತ್ಯ ಇದೆ ಎಂದರು. ಐತು ಕುಲಾಲ್ ಮಾತನಾಡಿ ವಿದ್ಯಾದಾನ ಶ್ರೇಷ್ಟದಾನ ಎಂದು ಹೇಳಿದರು. ವಿಶೇಷ ಸಾಧಕರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನಿತ ಮಂಜುನಾಥ್ ಕುಲಾಲ್ ಸಭೆಯಲ್ಲಿ ಮಾತನಾಡಿ ಜೀವನ ಹಾಗೂ ಸಂಘಟನೆಯ ಮೌಲ್ಯದ ಬಗ್ಗೆ ಮಾತನಾಡಿದರು.
ಹರಿಶ್ಚಂದ್ರ ಕುಲಾಲ್ ಕಾರ್ಕಳ ಮಾತನಾಡಿ ನಾವು ನಮ್ಮ ಸಂಸ್ಥೆಯನ್ನು ಬೆಳಗಬೇಕು, ನೀವು ಸಹಕರಿಸಿದರೆ ಮಾತ್ರ ಸಂಘ ಬೆಳವಣಿಗೆ ಕಾಣುತ್ತದೆ ಎಂದು ಸಲಹೆ ಇತ್ತರು.

ಸಭಾ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಇವರು ಮಾತಾನಾಡಿ ಇಂದಿನ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಯಿತು ಇದಕ್ಕೆ ಸಹಕರಿಸಿದ ಹೆಬ್ರಿ ತಾಲೂಕಿನ ಎಲ್ಲಾ ಕುಲಾಲ ಬಾಂಧವರಿಗೆ ಧನ್ಯವಾದ ಹೇಳಿದರು.

ವಿಜೇತ್ ಕುಲಾಲ್, ರಮೇಶ್ ಕುಲಾಲ್ , ವಾಸುದೇವ ಕುಲಾಲ್ ಶಿವಪುರ, ಸೀತಾರಾಮ್ ಕುಲಾಲ್ ಕಬ್ಬಿನಾಲೆ, ಸುರೇಶ್ ಕುಲಾಲ್ ಮುದ್ರಾಡಿ, ಸುಮಿತ್ರ ಕುಲಾಲ್ ಬೆಪ್ದೆ, ಐತು ಕುಲಾಲ್ ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version