Site icon ಉಡುಪಿ ನ್ಯೂಸ್ ಪ್ಲಸ್

ಶ್ರೀ ಶಾರದಾ ಕೆ.ಕೋ-ಆಪ್.ಸೊಸೈಟಿ ಪ್ರಧಾನ ಕಚೇರಿ ಉದ್ಘಾಟನೆ

ಉಡುಪಿ, ಡಿ. 12: ಶ್ರೀ ಶಾರದಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಸ್ವಂತ ನಿವೇಶನ ಹರಿಶ್ಚಂದ್ರ ಮಾರ್ಗದ ವಾದಿರಾಜ ರಸ್ತೆಯಲ್ಲಿರುವ ಶಿವಾಂಶ್ ವಸತಿ ಸಮುಚ್ಚಯದಲ್ಲಿ ನೂತನ ಪ್ರಧಾನ ಕಚೇರಿ ‘ಶ್ರೀ ಶಾರದಾ ಸಹಕಾರ ಸೌಧ’ದ ಉದ್ಘಾಟನೆ ಶುಕ್ರವಾರ ಜರಗಿತು.

ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಮಹಾಪ್ರಬಂಧಕ ಬೊಕ್ಕಸ ಚಂದ್ರಶೇಖರ್‌ರಾವ್ ಉದ್ಘಾಟಿಸಿ ಮಾತನಾಡಿ ಸಹಕಾರಿ ಬ್ಯಾಂಕ್ ಗಳು ಪಿಗ್ಮಿ ಯೋಜನೆಯನ್ನು ಉತ್ತಮ ರೀತಿಯಲ್ಲಿ ಕಾರ್ಯನಿವಹಿಸುತ್ತಿದೆ ಜನ ಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಿಕೊಡುವಲ್ಲಿ ಸಹಕಾರಿ ಕ್ಷೇತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಉಡುಪಿ, ದ.ಕ. ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಈ ಸೊಸೈಟಿಯ ಎಲ್ಲ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿಯವರು ಭದ್ರತಾ ಕೊಠಡಿ ಉದ್ಘಾವಾಣಿಜ್ಯ ಬ್ಯಾಂಕುಗಳ ತವರುರೂ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರೀಯ ಬ್ಯಾಂಕುಗಳು ವಿಲೀನಗೊಂಡಿದ್ದರ ಪರಿಣಾಮ ಸಹಕಾರಿ ಬ್ಯಾಂಕುಗಳು ಬೆಳೆಯಲು ಪ್ರಾರಂಭವಾಯಿತು ಉಡುಪಿ ಜಿಲ್ಲೆಯಲ್ಲಿ 752 ಸಹಕಾರಿ ಸಂಸ್ಥೆ ನೊಂದಣಿಗೊಂಡಿದೆ ಸಹಕಾರಿ ಸಂಸ್ಥೆಗಳ ಮೇಲೆ ಜನರಿಟ್ಟ ಪ್ರೀತಿ, ವಿಶ್ವಾಸದಿಂದ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಎಂದರು

ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಮಾತನಾಡಿ, 40 ಕೋ. ರೂ. ಠೇವಣಿ ಸಂಗ್ರಹಿಸಿ, 37 ಕೋ. ರೂ. ಸಾಲ ವಿತರಿಸಿ ಜನರೊಂದಿಗೆ ಮುನ್ನಡೆಯುತ್ತಿರುವ ಸೊಸೈಟಿ ಸಾರ್ಥಕ 25 ವರ್ಷಗಳನ್ನು ಪೂರೈಸಿದೆ. ಸೊಸೈಟಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ. ಸದಾನಂದ ರಾವ್ ಮಾತನಾಡಿ, ಸುಮಾರು 1,385 ಚ.ಅಡಿ ವಿಸ್ತೀರ್ಣದ ಕಟ್ಟಡದ ತಳ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ನೆಲ ಅಂತಸ್ತಿನಲ್ಲಿ ಸಂಘದ ಪ್ರಧಾನ ಕಚೇರಿ, ಆಡಳಿತ ಕಚೇರಿ, ಗ್ರಾಹಕರಿಗೆ ಸೇಫ್ ಲಾಕರ್‌ಸೌಲಭ್ಯ ಇರಲಿದೆ. ಎಂದರು

ನಿರ್ದೇಶಕರಾದ ಕೆ. ಗಣೇಶ್ ರಾವ್, ಬಿ. ಕೃಷ್ಣಮೂರ್ತಿ ರಾವ್, ವೈ. ಮೋಹನ್ ರಾವ್, ವೈ. ಪ್ರಕಾಶ್ ರಾವ್, ಎಂ. ಪದ್ಮಾನಂದ ರಾವ್, ವೈ. ವಿಟ್ಠಲ ರಾವ್, ಹರಿಣಾಕ್ಷಿ ಎನ್. ರಾವ್, ಸಿಇಒ ಎನ್. ಪಟ್ಟಾಭಿರಾಮ ರಾವ್ ಉಪಸ್ಥಿತರಿದ್ದರು.

ನಿರ್ದೇಶಕರಾದ ಉದಯ ಬಿ. ರಾವ್ ಬಾರಕೂರು ಸ್ವಾಗತಿಸಿದರು. ಕೃಷ್ಣ ಕುಮಾರ್‌ರಾವ್ ಮಟ್ಟು ಪ್ರಸ್ತಾ ವನೆಗೈದು, ನಿರೂಪಿಸಿದರು. ಗಣೇಶ್ ರಾವ್ ಕುಂಭಾಶಿ ವಂದಿಸಿದರು.

ಭಾರತ್ ಡೆವಲಪರ್ಸ್ ಮಾಲಕ ಯು. ಪ್ರತೀಕ್ ರಾವ್ ಅವರನ್ನು ಸಮ್ಮಾನಿಸಲಾಯಿತು. ಸಂಘದಲ್ಲಿ ನಿರಂತರ ವ್ಯವಹಾರ ನಡೆಸಿದ ಹಿರಿಯ ಸದಸ್ಯರಾದ ವಿಶ್ವರಾಜ್ ಭಟ್, ವೆಂಕಟರಾಜ್ ಭಟ್, ಮಹಮ್ಮದ್, ಮಂಜುನಾಥ ಹೆಬ್ಬಾರ್, ಯು. ಗೌರವಿಸಲಾಯಿತು.

Exit mobile version