Site icon ಉಡುಪಿ ನ್ಯೂಸ್ ಪ್ಲಸ್

ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ), ಉಡುಪಿ ನೂತನ ಸ್ವಂತ ಕಟ್ಟಡ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

2015ರಲ್ಲಿ ಪ್ರಾರಂಭವಾದ ಸಂಸ್ಥೆ ಗ್ರಾಹಕ ಬಂಧುಗಳ ಪ್ರೀತಿ, ಪ್ರೋತ್ಸಾಹ ಹಾಗೂ ವಿಶ್ವಾಸನೀಯ ವ್ಯವಹಾರದೊಂದಿಗೆ ದಶ ವರ್ಷವನ್ನು ಪೂರೈಸುತ್ತಾ ಸಹಕಾರಿ ಸಮೃದ್ದಿಯ ಪ್ರತೀಕವಾಗಿ ನಿರ್ಮಿತಗೊಂಡ ಸ್ವಂತ ಕಟ್ಟಡ “ಸಹಕಾರ ಸಾನಿಧ್ಯ” ಉದ್ಘಾಟನಾ ಸಮಾರಂಭವು ದಿ.೧೪-೧೨-೨೦೨೫ನೇ ರವಿವಾರ ಪೂರ್ವಾಹ್ನ ೧೦.೦೦ಗಂಟೆಗೆ ಶ್ರೀ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು, ಶ್ರೀ ಅದಮಾರುಮಠ ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳುವುದು. ಕಾರ್ಯಕ್ರಮದಲ್ಲಿ ಮದರ್ ಆಫ್ ಸಾರೋಸ್ ಚರ್ಚ್ನ ಸಹಾಯಕ ಧರ್ಮಗುರುಗಳಾದ ವಂದನೀಯ ರೆ. ಫಾ. ಲಿಯೋ ಪ್ರಕಾಶ್ ಡಿಸೋಜ, ಉಡುಪಿ ವಿಧಾನಸಭಾ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ, ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿರುವರು.
ಆಮಂತ್ರಣ ಪತ್ರಿಕೆಯನ್ನು ಮಾನ್ಯ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಪ್ರಧಾನ ವ್ಯವಸ್ಥಾಪಕರಾದ ಶ್ರೀಗಣೇಶ್ ಶೇರಿಗಾರ್‌ರವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.

Exit mobile version