Site icon ಉಡುಪಿ ನ್ಯೂಸ್ ಪ್ಲಸ್

ದಂಡತೀರ್ಥ: ವಿಜ್ಞಾನ ಮಾದರಿ ಉದ್ಘಾಟನೆ

ಕಾಪು , ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಹಳೆ ವಿದ್ಯಾರ್ಥಿನಿ, ಪೊಲಿಪು ಪದವಿ ಪೂರ್ವ ಕಾಲೇಜ್ ನ ಸಹಶಿಕ್ಷಕಿ ಶುಭಾ ಎಸ್ ಸುವರ್ಣ ಉದ್ಘಾಟಿಸಿ,ಮಕ್ಕಳಲ್ಲಿರುವ ಜ್ಞಾನದ ಸೃಜನಾತ್ಮಕತೆ ವ್ಯಕ್ತವಾಗುವುದಲ್ಲದೆ,ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುತ್ತದೆ ಹಾಗೂ ಹೊಸ ಹೊಸ ತಂತ್ರಜ್ಞಾನದ ಅರಿವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಚಾಲಕರಾದ ಡಾ ll ಕೆ.ಪ್ರಶಾಂತ್ ಶೆಟ್ಟಿ ಯವರು ಇಂತಹ ಕಾರ್ಯಕ್ರಮ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಿ,ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್,ಪ್ರಾಂಶುಪಾಲ ನೀಲಾನಂದ ನಾಯ್ಕ್,ಶಿಕ್ಷಕ ಶಿವಣ್ಣ ಬಾಯರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್, ಕಾರ್ಯಕ್ರಮದ ಸಂಯೋಜಕಿ ಕವಿತಾ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಹುಸೇನಬ್ಬ ಮತ್ತು ಶಕುಂತಲಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ತನ್ಮಯ್ ಮಾದರಿಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿನಿಯರಾದ ನಿಖತ್ನಾಝ್ ಸ್ವಾಗತಿಸಿದರು.ಆಯಿಷಾ ಇಜ್ಜ್ಞಾ ವಂದಿಸಿದ ಈ ಕಾರ್ಯಕ್ರಮವನ್ನು ಸಬಾನಾಜ್ ನಿರೂಪಿಸಿದರು.

Exit mobile version