Site icon ಉಡುಪಿ ನ್ಯೂಸ್ ಪ್ಲಸ್

ಮಲ್ಪೆ: ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ 2 ಲಕ್ಷ ರೂಪಾಯಿ ಅಪಘಾತ ವಿಮೆ ಹಸ್ತಾಂತರ.

ಭಾರತೀಯ ಸ್ಟೇಟ್ ಬ್ಯಾಂಕ್, ಮಲ್ಪೆ ಶಾಖೆಯಿಂದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಗ್ರಾಹಕರಾದ ಶ್ರೀ ಸೂರ್ಯನಾರಾಯಣ ಬಿ ಎನ್ ಅವರಿಗೆ ಸಂಬಂಧಿಸಿದ Rs.2,00,000 ಅಪಘಾತ ವಿಮೆಯನ್ನು ಹೆಂಡತಿಯಾದ ಶ್ರೀಮತಿ ಗೌರಿ ಎಸ್ ಎನ್ ಅವರಿಗೆ SBI ರೀಜಿನಲ್ ಆಫೀಸ್ ಉಡುಪಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಪ್ರಕಾಶ್ ಬಿ ಅಡಿಗ ಅವರಿಗೆ ಚೆಕ್ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಸ್ ಬಿ ಐ ನ ಮುಖ್ಯ ವ್ಯವಸ್ಥಾಪಕ ಕೀಳಂಜೆ
ಶ್ರೀಕೃಷ್ಣರಾಜ ಭಟ್ , ಮಲ್ಪೆ ಶಾಖೆಯ ಮ್ಯಾನೇಜರ್ ರಾಜೇಶ್ ಗಂಗೊಳ್ಳಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಅಡಿಗ ಅವರು ಮಾತನಾಡುತ್ತಾ ಬ್ಯಾಂಕಿನ ಎಲ್ಲಾ ಗ್ರಾಹಕರು ತಮಗೆ ಅನುಕೂಲವಾಗುವ ವಿಮೆಯನ್ನು ಬ್ಯಾಂಕಿನ ವ್ಯವಸ್ಥಾಪಕರಲ್ಲಿ ಕೇಳಿ ಮಾಡಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

Exit mobile version