Site icon ಉಡುಪಿ ನ್ಯೂಸ್ ಪ್ಲಸ್

ದಂಡತೀರ್ಥ: ಮಕ್ಕಳ ದಿನಾಚರಣೆ

ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲ ನೀಲಾನಂದ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ನಮ್ಮ ಹಳೆವಿದ್ಯಾರ್ಥಿನಿ,ಹಾಗೂ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ಪ್ರಿಶ ಪಿ.ಶೆಟ್ಟಿ ಯವರು ದೀಪ ಬೆಳಗಿಸಿ,ಬಹುಮಾನಗಳನ್ನು ವಿತರಿಸಿ,ಮಕ್ಕಳ ಬದುಕಿನಲ್ಲಿ ಬಾಲ್ಯಕಾಲದ ಚಟುವಟಿಕೆಗಳು ಸ್ಮರಣೀಯ,ಅದರಲ್ಲೂ ಶಾಲಾ ಜೀವನದಲ್ಲಿ ಪಡೆಯುವ ಶಿಸ್ತು ಮತ್ತು ಆನಂದ ಭಾವೀ ಬದುಕನ್ನು ಸುಂದರಗೊಳಿಸುತ್ತದೆ.ಹಾಗೂ ಶಾಲೆಯಲ್ಲಿ ಆಚರಿಸುವ ಇಂತಹ ಆಚರಣೆಗಳು ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿಸುತ್ತದೆ ಎಂಬ ಸಂದೇಶವನ್ನು ನೀಡಿದರು.
ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್,ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಮೀ ರಾವ್,ಶಿಕ್ಷಕ ,ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Exit mobile version