Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿಯ ಅನವಿ ಪಿ ಶೆಟ್ಟಿಯವರಿಗೆ ಸಂಪೂರ್ಣ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ

ಧಾರವಾಡ ರಂಗಾಯಣದಲ್ಲಿ ಸಂಪೂರ್ಣ ವಾರ್ತೆ ದ್ರಶ್ಯ ಮಾಧ್ಯಮ ಆಯೋಜಿಸಿದ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯಶಸ್ವೀ ನಕ್ಷತ್ರಗಳಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಡುಪಿ ಸಂತೆಕಟ್ಟೆಯ ಲಕ್ಷ್ಮಿ ಮತ್ತು ಪ್ರಕಾಶ್ ಶೆಟ್ಟಿ ದಂಪತಿಗಳ ಪುತ್ರಿ ಕರಾಟೆ ಬ್ಲಾಕ್ ಬೆಲ್ಟ್ ಪದವೀಧರೆ ಕುಮಾರಿ ಅನವಿ ಪಿ ಶೆಟ್ಟಿ ಯವರಿಗೆ ಸಂಪೂರ್ಣ ರತ್ನ ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಅನವಿ ಪಿ ಶೆಟ್ಟಿ ಬ್ರಹ್ಮಾವರದ ಜಿ ಎಂ ಪಬ್ಲಿಕ್ ಸ್ಕೂಲ್ ನಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸುರಕೊಟ್ಟಿಕೊಪ್ಪ ಸದ್ಗುರುಗಳಾದ ಲಡ್ಡುಮುತ್ಯಾ ಆಶ್ರಮದ ಶ್ರೀ ಲಡ್ಡುಮುತ್ಯಾ ಸ್ವಾಮೀಜಿ, ಹುಬ್ಬಳ್ಳಿಯ ಸಮಾಜ ಸೇವಕರುಗಳಾದ ವೆಂಕಟೇಶ್ ಕಾಟವೇ, ಸಂತೋಷ್ ವೆರ್ಣೇಕರ್, ಈಶ್ವರಗೌಡ ಪಾಟೀಲ,ರಮೇಶ್ ಮಹದೇವಪ್ಪನವರ್, ಅನ್ನಪೂರ್ಣ ಎ ಪಾಟೀಲ, ಭಾವೇಶ್ ರಾಠೋಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಪೂರ್ಣ ವಾರ್ತೆ ಚಾನೆಲ್ ನ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ್ ಬಿ ವಿ ಕಾರ್ಯಕ್ರಮ ಸಂಯೋಜಿಸಿದರು.

Exit mobile version