Site icon ಉಡುಪಿ ನ್ಯೂಸ್ ಪ್ಲಸ್

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ 70 ಸಾಧಕರ ಆಯ್ಕೆ

ಬೆಂಗಳೂರು, (ಅಕ್ಟೋಬರ್ 30): 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Awards 2025 ಪ್ರಕಟವಾಗಿದ್ದು, ಬಹುಭಾಷಾ ನಟ ಪ್ರಕಾಶ್​ ರಾಜ್​  (Actor Prakash Raj) ಸೇರಿದಂತೆ ಒಟ್ಟು 70 ಜನ ಸಾಧಕಕರನ್ನ ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಇಂದು (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದ್ದು, ಇದೇ ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದ್ದು,‌ ನಾಲ್ಕೈದು‌ ಬಾರಿ‌ ಸಭೆ ನಡೆಸಿದ ಸದಸ್ಯರು ಅರ್ಹರನ್ನು ‌ಆಯ್ಕೆ ಮಾಡಲಾಗಿದೆ ಎಂದು ಶಿವಾರಜ್ ತಂಗಡಗಿ‌ ತಿಳಿಸಿದರು.ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. ಇನ್ನು ಈ ಬಾರಿ 12 ಮಂದಿ‌ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ‌‌ ಮಾಡಲಾಗಿದೆ ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌

ಸಾಹಿತ್ಯ ಕ್ಷೇತ್ರ

ಚಲನಚಿತ್ರ /ಕಿರುತೆರೆ

ಆಡಳಿತ

ವೈದ್ಯಕೀಯ

ಸಂಗೀತ: ದೇವೆಂದ್ರಕುಮಾರ ಪತ್ತಾರ್- ಕೊಪ್ಪಳ, ಮಡಿವಾಳಯ್ಯ ಸಾಲಿ-ಬೀದರ್ ನೃತ್ಯ: ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು

ಸಮಾಜ ಸೇವೆ

ಹೊರನಾಡು/ ಹೊರದೇಶ: ಜಕರಿಯ ಬಜಪೆ (ಸೌದಿ), ಪಿ ವಿ ಶೆಟ್ಟಿ (ಮುಂಬೈ)

ಪರಿಸರ: ರಾಮೇಗೌಡ- ಚಾಮರಾಜನಗರ, ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ

ಕೃಷಿ: ಡಾ.ಎಸ್.ವಿ.ಹಿತ್ತಲಮನಿ-ಹಾವೇರಿ, ಎಂ ಸಿ ರಂಗಸ್ವಾಮಿ-ಹಾಸನ.

ಮಾಧ್ಯಮ: ಕೆ.ಸುಬ್ರಮಣ್ಯ-ಬೆಂಗಳೂರು, ಅಂಶಿ ಪ್ರಸನ್ನಕುಮಾರ್-ಮೈಸೂರು, ಬಿ.ಎಂ ಹನೀಫ್- ದಕ್ಷಿಣ ಕನ್ನಡ, ಎಂ ಸಿದ್ಧರಾಜು- ಮಂಡ್ಯ, ರಾಮಯ್ಯ ಚಿಕ್ಕಬಳ್ಳಾಪುರ, ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ, ಡಾ. ಆರ್. ವಿ ನಾಡಗೌಡ

Exit mobile version