ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ದೀಪಾವಳಿ ಆಚರಣೆಯು ಸಂಚಾಲಕರಾದ ಡಾ.ಪ್ರಶಾಂತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸರಳವಾಗಿ ನಡೆಯಿತು.ಬಳಿಕ ಮಾತನಾಡಿ, ಬತ್ತಿ ,ಎಣ್ಣೆಯೊಂದಿಗೆ,ಉರಿದು ಬೆಳಕು ನೀಡುವಂತೆ ,ಶಾಲೆಯಲ್ಲಿಯೂ ಶಿಕ್ಷಕ ಶಿಕ್ಷಕೇತರರು ದೀಪದಂತೆ ಸೇವೆ ನೀಡಿದಾಗ ಮುದ್ದು ಮಕ್ಕಳ ಬದುಕು ಬೆಳಗಲು ಕಾರಣವಾಗುತ್ತದೆ ಎಂಬ ಕಿವಿಮಾತನ್ನು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ,ಅಮೆರಿಕದಲ್ಲಿ ಪ್ರಖ್ಯಾತ ವೈದ್ಯರಾಗಿದ್ದ,ಜೊತೆಗೆ ಉಳಿಯಾರಗೋಳಿ ದಂಡತೀರ್ಥ ಪ್ರತಿಷ್ಠಾನದ ಅಧ್ಯಕ್ಷರಾದ ಡಾll ಸೀತಾರಾಮ ಭಟ್ ದೀಪ ಬೆಳಗಿಸಿ , ಶುಭಾಶಯ ಕೋರಿ,ಶಿಕ್ಷಕರು ಹಣತೆಯಂತೆ ಉರಿದು,ಮಕ್ಕಳಲ್ಲಿರುವ ಅಜ್ಞಾನದ ಅಂಧಕಾರವನ್ನು ದೂರಮಾಡಿ ಅವರಲ್ಲಿ ಜ್ಞಾನದ ಬೆಳಕನ್ನು ತುಂಬಿಸಬೇಕು.ಶಾಲಾ ಕಾಲೇಜುಗಳು ಇಂತಹ ಸಂಸ್ಕೃತಿಯ ಪಾಠವನ್ನು ನೀಡಿದಾಗ ಭವಿಷ್ಯದಲ್ಲಿ ಸಂಸ್ಕಾರವಂತರಾಗುತ್ತಾರೆ.ಎಂಬ ಸಂದೇಶವನ್ನು ನೀಡಿ ಸಿಹಿ ವಿತರಿಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ನೀಲಾನಂದ ನಾಯ್ಕ್,ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್,ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನ್ಹಸ್,ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮಿ ರಾವ್,ಶಿಕ್ಷಕ , ಶಿಕ್ಷಕೇತರ ವೃಂದ,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದಂಡತೀರ್ಥ: ದೀಪಾವಳಿ ಆಚರಣೆ

