Site icon ಉಡುಪಿ ನ್ಯೂಸ್ ಪ್ಲಸ್

ಕಾರ್ಕಳ : ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ಗೋಪೂಜೆ

ಕಾರ್ಕಳ ಕಾಂಗ್ರೆಸ್ ನ ಜನಪ್ರಿಯ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಪತ್ನಿ ಶ್ರೀಮತಿ ನಮಿತಾ ಶೆಟ್ಟಿ ಅವರೊಂದಿಗೆ ಕಾರ್ಕಳ ಬಂಡಿಮಠದ ಅನಂತಕೃಷ್ಣ ಗೋಶಾಲೆಯಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜಾ ಕೈಂಕರ್ಯಗಳನ್ನು ಕೈಗೊಂಡರು.

ವರ್ಷಂಪ್ರತಿ ದೀಪಾವಳಿಯ ಸಂದರ್ಭದಲ್ಲಿ ಕಾರ್ಕಳ ಬಂಡಿಮಠದ ಅನಂತಕೃಷ್ಣ ಗೋಶಾಲೆಯಲ್ಲಿ ಗೋಪೂಜೆಯನ್ನು ನಡೆಸಿಕೊಂಡು ಬರುತ್ತಿರುವ ಉದಯ ಶೆಟ್ಟಿ ಮುನಿಯಾಲು ದಂಪತಿಗಳು ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿಯೂ ಗೋಪೂಜೆಯಲ್ಲಿ ಪಾಲ್ಗೊಂಡು ಮುಕ್ಕೋಟಿ ದೇವರು ನೆಲೆಸಿರುವ ಗೋಮಾತೆಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಗೋಶಾಲೆಯ ಪ್ರಮುಖರು ಅರ್ಚಕರಾದ ಗೋಪಿನಾಥ ಪುರಾಣಿಕ್, ಕಾರ್ಕಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಶುಭದ ರಾವ್, ಕೆ.ಎಮ್.ಎಪ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ತಾರನಾಥ ಕೋಟ್ಯಾನ್, ಪುರಸಭಾ ಸದಸ್ಯರಾದ ವಿವೇಕಾನಂದ ಶೆಣೈ, ಶ್ರೀಮತಿ ಪ್ರತಿಮಾ ರಾಣೆ, ನಳಿನಿ ಆಚಾರ್ಯ ಮತ್ತು ಕೆಡಿಪಿ ಸದಸ್ಯರಾದ ರುತ್ಮಯ್ಯ ಶೆಟ್ಟಿಗಾರ್, ರಹೀಮ್ ಅಜೆಕಾರು, ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ, ಸೊಸೈಟಿ ಅದ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ರೀನಾ ಡಿಸೋಜ, ಯುವ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ ಜೋಗಿ, ಕಡ್ತಲ ಉಪಸ್ಥಿತರಿದ್ದರು

Exit mobile version